ಅಂತರಾಷ್ಟ್ರೀಯ

ಭಾರತದ ಜತೆ ಪೂರ್ವಷರತ್ತುಗಳಿಲ್ಲದ ಮಾತಿಗೆ ಸಿದ್ಧ: ಷರೀಫ್

Pinterest LinkedIn Tumblr

MODI-SHARIF

ವಲ್ಲೆಟ್ಟಾ, ಮಾಲ್ಟಾ: ಸುಸ್ಥಿರ ಶಾಂತಿಗಾಗಿ ಯಾವುದೇ ಪೂರ್ವ ಷರತ್ತುಗಳಿಲ್ಲದೇ ಭಾರತದ ಜತೆಗೆ ಮಾತುಕತೆಗೆ ಪಾಕಿಸ್ತಾನ ಸಿದ್ಧ ಎಂದು ಪ್ರಧಾನಿ ನವಾಜ್ ಷರೀಫ್‌ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.

ಅಲ್ಲದೇ, ಭಾರತ ಹಾಗೂ ಆಫ್ಘಾನಿಸ್ತಾನ ಸೇರಿದಂತೆ ಎಲ್ಲ ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳಲು ಪಾಕಿಸ್ತಾನ ಬಯಸುತ್ತದೆ ಎಂದೂ ಅವರು ಶುಕ್ರವಾರ ತಿಳಿಸಿದ್ದಾರೆ.

ಮಾಲ್ಟಾ ರಾಜಧಾನಿ ವಲ್ಲೆಟ್ಟಾದಲ್ಲಿ ನಡೆದ ಕಾಮನ್‌ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆ ಅಂಗವಾಗಿ ಪಾಕ್‌ ಪ್ರಧಾನಿ ಷರೀಫ್ ಅವರು ಬ್ರಿಟನ್ ಪ್ರಧಾನಿ ಡೇವಿಡ್‌ ಕ್ಯಾಮರೂನ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ವ್ಯಾಪಾರ, ಹೂಡಿಕೆ ಹಾಗೂ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಮುಂದುವರೆಸಲು ಉಭಯ ನಾಯಕರು ಒಪ್ಪಿಕೊಂಡಿದ್ದರು.

ಇದೇ ವೇಳೆ, ಎಲ್ಲ ಬಗೆಯ ಭಯೋತ್ಪಾದನೆಯನ್ನು ಪಾಕಿಸ್ತಾನ ಖಂಡಿಸುತ್ತದೆ ಎಂದಿದ್ದ ಷರೀಫ್, ಸ್ವಯಂ ಪಾಕ್‌ ಕೂಡ ಭಯೋತ್ಪಾದನೆಯ ಬಲಿಪಶುವಾಗಿದೆ. ಫ್ರಾನ್ಸ್ ಮೇಲಿನ ದಾಳಿಯ ನೋವನ್ನು ಪಾಕ್‌ಗೆ ತಿಳಿಯುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು.

Write A Comment