ರಾಷ್ಟ್ರೀಯ

ದೇಶವನ್ನು ಬಿಟ್ಟು ಹೋಗಬೇಕಾದವರು ಬ್ರಾಹ್ಮಣರು: ಪ್ರೊ.ಚಂಪಾ

Pinterest LinkedIn Tumblr

champa-ngoಬೆಂಗಳೂರು: ಅಸಹಿಷ್ಣುತೆ ಬಗ್ಗೆ ಮಾತನಾಡಿದವರನ್ನು ದೇಶ ವಿರೋಧಿಗಳು ಎಂದು   ಬಿಂಬಿಸಲಾಗುತ್ತಿದೆ. ಕೆಲವರು ಮಾತೆತ್ತಿದರೆ ದೇಶದಲ್ಲಿ ಇರಲಿಕ್ಕೆ ಲಾಯಕ್ಕಿಲ್ಲ ಎಂದು  ಹೇಳುತ್ತಿದ್ದಾರೆ. ಹೀಗೆ ಹೇಳುವುದಕ್ಕೆ ಇವರ್ಯಾರು? ಮೊಟ್ಟ ಮೊದಲು ಈ ದೇಶವನ್ನು ಬಿಟ್ಟು  ಹೋಗಬೇಕಾದವರು ಬ್ರಾಹ್ಮಣರು. ರಾಷ್ಟ್ರ ಬಿಟ್ಟು ಹೋಗಬೇಕಾದರೆ ಹೋಗಲಿ, ಹೋಗಿ ಅಂತ  ನಾನು ಹೇಳಲಾರೆ ಎಂದು ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ ಹೇಳಿದರು.

ಎನ್‍ಜಿಒ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ  ದಿನದ  ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಆಮೀರ್ ಖಾನ್ ದೇಶದಲ್ಲಿ  ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದ ಕುರಿತು ಹೇಳಿಕೆ ನೀಡಿದ್ದನ್ನೇ ದೊಡ್ಡದು ಮಾಡಿ ರಾಷ್ಟ್ರ ಬಿಟ್ಟು  ಹೋಗುವಂತೆ ಕೋಮುವಾದಿಗಳು ಹೇಳುತ್ತಿದ್ದಾರೆ. ಆದರೆ ಆಮೀರ್ ಖಾನ್ ಯಾವುದೇ ರಾಜಕೀಯ ಪಕ್ಷದ ವಕ್ತಾರನಲ್ಲ. ವಸ್ತುಸ್ಥಿತಿಯನ್ನು  ಹೇಳಿದ್ದನ್ನೇ ದೊಡ್ಡದು ಮಾಡಿ ದೇಶದಲ್ಲಿ ಕೋಲಾಹಲ  ಸೃಷ್ಟಿಸಿದರು ಎಂದು ಟೀಕಿಸಿದರು.

ದೇಶದ ಮೂಲ ನಿವಾಸಿಗಳಾದ ದ್ರಾವಿಡರ ಅಧಿಕಾರ, ಹಣ, ಆಸ್ತಿ ಮತ್ತು ಬದುಕುವ ಸ್ವಾತಂತ್ರ್ಯವನ್ನು ಆರ್ಯರು ಕಿತ್ತುಕೊಂಡು ಶೋಷಣೆ ಮಾಡಿದರು. ಇವರ ದಬ್ಬಾಳಿಕೆ ಇನ್ನೂ  ಮುಂದುವರಿದಿದೆ. ಈ ದೇಶದ ಮೇಲೆ ಮೂಲಭೂತ ಹಕ್ಕು ಇರುವುದು ದ್ರಾವಿಡರಾದ ನಮ್ಮದು ಎಂದು  ಹೇಳಿದರು.

ಅನೇಕ ದಾರ್ಶನಿಕರು ಸಾವಿರಾರು ವರ್ಷಗಳಿಂದ ಹೋರಾಟ ಮಾಡಿದರೂ ಜಾತೀಯತೆ ಬೇರು  ಆಳಕ್ಕೆ ಹೋಗುತ್ತಿದೆ ಹೊರತು, ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಸದಾಶಿವ ಆಯೋಗದ ಬಗ್ಗೆ  ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ.

●ಎಚ್. ಆಂಜನೇಯ ಸಚಿವ

ಮಹಾತ್ಮರ ಹೆಸರಿನಲ್ಲಿ ಸರ್ಕಾರಿ ರಜೆ ಪಡೆದು ಕಾಯಕ ಮರೆಯುತ್ತಿದ್ದೇವೆ. ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ,  ಅಂಬೇಡ್ಕರ್ ಜಯಂತಿಯನ್ನು ರಾಷ್ಟ್ರೀಯ ದಿನಾಚರಣೆ ಮಾಡಿ ಸಾರ್ವತ್ರಿಕ ರಜೆ ನೀಡಬೇಕು.

●ಪ್ರೊ.ಚಂಪಾ, ಸಾಹಿತಿ

Write A Comment