ರಾಷ್ಟ್ರೀಯ

ಶಾಲಾ ಆವರಣದಲ್ಲಿ ಜನ್ಮದಿನ ಆಚರಿಸಿ ಮದ್ಯ ಸೇವಿಸಿದ ವಿದ್ಯಾರ್ಥಿನಿಯರು

Pinterest LinkedIn Tumblr

saleನಮಕ್ಕಲ್: ಆಘಾತಕಾರಿ ಘಟನೆಯೊಂದರಲ್ಲಿ ವಿದ್ಯಾರ್ಥಿನಿಯರು ತಮ್ಮ ಗೆಳತಿಯ ಜನ್ಮದಿನಾಚರಣೆ ಆಚರಿಸಲು ಸರಕಾರಿ ಶಾಲೆಯ ಆವರಣದಲ್ಲಿಯೇ ಮದ್ಯ ಸೇವಿಸಿದ ಘಟನೆ ವರದಿಯಾಗಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಏಳು ವಿದ್ಯಾರ್ಥಿನಿಯರು ಪರೀಕ್ಷೆ ಆರಂಭವಾಗುವ ಮುನ್ನವೇ ತಮ್ಮ ಗೆಳತಿಯ ಜನ್ಮ ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಶಾಲಾ ಆವರಣದಲ್ಲಿಯೇ ಕೇಕ್ ಕಟ್ ಮಾಡಿ, ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಸೇವಿಸಿದ್ದಾರೆ. ವಿದ್ಯಾರ್ಥಿನಿಯರು ಮದ್ಯ ಸೇವಿಸಿದ ಬಗ್ಗೆ ಸುದ್ದಿ ಹರಡಿದೆ. ವಿದ್ಯಾರ್ಥಿನಿಯರು ಏಳುತ್ತಾ ಬೀಳುತ್ತಾ ಪರೀಕ್ಷೆಗೆ ಹಾಜರಾಗಿ ಮನೆಗೆ ತೆರಳಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಹೆಡ್‌ಮಿಸ್ಟ್ರೆಸ್ ಕೃಷ್ಣವೇಣಿ ತನಿಖೆಗೆ ಆದೇಶಿಸಿ, ಎಲ್ಲಾ ಏಳು ವಿದ್ಯಾರ್ಥಿನಿಯರು ಮಾರನೇ ದಿನ ಪೋಷಕರೊಂದಿಗೆ ಶಾಲೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ಕೇವಲ ನಾಲ್ಕು ವಿದ್ಯಾರ್ಥಿನಿಯರು ಮಾತ್ರ ತಮ್ಮ ಪೋಷಕರೊಂದಿಗೆ ಹಾಜರಾಗಿದ್ದಾರೆ. ಅವರಿಗೆ ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಉಚ್ಚಾಟಿಸಿದ್ದಾರೆ.

ವಿದ್ಯಾರ್ಥಿನಿಯರ ಅಸಭ್ಯ ವರ್ತನೆಯ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿ ಗೋಬಿದೊಸ್ ತನಿಖೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಹೆಡ್‌ಮಿಸ್ಟ್ರೆಸ್ ಮತ್ತು ಇತರ ಆರು ಮಂದಿ ಶಿಕ್ಷಕರಿಗೆ ತಮ್ಮ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ.

Write A Comment