ರಾಷ್ಟ್ರೀಯ

ಬಿಹಾರ್ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ: ಸಿಎಂ ನಿತೀಶ್ ಕುಮಾರ್ ಘೋಷಣೆ

Pinterest LinkedIn Tumblr

nitiಪಾಟ್ನಾ,: 2016ರ ಏಪ್ರಿಲ್ 1 ರಿಂದ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಬಡವರು ತೀರಾ ಬಡವರು ಕೂಡಾ ಮದ್ಯ ವ್ಯಸನಿಗಳಾಗುತ್ತಿರುವುದರಿಂದ ಅವರ ಕುಟುಂಬಗಳು ಮತ್ತು ಮಕ್ಕಳ ಶಿಕ್ಷಣ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯಿಂದ ಮಹಿಳೆಯರ ಮೇಲೆ ಮತ್ತು ಕೌಟಂಬಿಕ ದೌರ್ಜನ್ಯ ಪ್ರಕರಣಗಳಿಗೆ ಮೂಲಕಾರಣವಾಗಿದ್ದರಿಂದ ಅಪರಾಧ ಸಂಖ್ಯೆಗಳಲ್ಲಿ ಹೆಚ್ಚಳವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪುರುಷರು ಮದ್ಯೆ ಸೇವನೆಯ ದಾಸರಾಗುತ್ತಿರುವುದರಿಂದ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಮದ್ಯ ಮಾರಾಟಕ್ಕೆ ನಿಷೇಧಕ್ಕೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇಂದು ಉನ್ನತಾಧಿಕಾರಿಗಳ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯ ಮಾರಾಟ ನಿಷೇಧ ಘೋಷಿಸಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಒಂದು ವೇಳೆ, ಸರಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗುವುದು ಎಂದು ನಿತೀಶ್ ಪ್ರಕಟಿಸಿದ್ದರು.

ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಕೂಡಾ ಸಿಎಂ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಸ್ವಾಗತಿಸಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ರಾಜ್ಯ ಸರಕಾರಕ್ಕೆ ವಾರ್ಷಿಕವಾಗಿ 3650 ಕೋಟಿ ರೂಪಾಯಿಗಳ ಆದಾಯ, ಮದ್ಯ ಮಾರಾಟ ನಿಷೇಧದಿಂದ ಕೊರತೆಯಾಗಲಿದೆ ಎಂದು ಅಬಕಾರಿ ಖಾತೆ ಸಚಿವ ಅಬ್ದುಲ್ ಜಲೀಲ್ ಮಸ್ತಾನ್ ಹೇಳಿದ್ದಾರೆ.

Write A Comment