ರಾಷ್ಟ್ರೀಯ

ಭಾರತೀಯ ವಿದ್ಯಾರ್ಥಿಗೆ ಜರ್ಮನಿಯ ಹಸಿರು ಪ್ರಶಸ್ತಿ

Pinterest LinkedIn Tumblr

arun-prasad-kumarಹೊಸದಿಲ್ಲಿ, ನ. 25: ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಭೂ ಮತ್ತು ಬಾಹ್ಯಾಕಾಶ ವಿಜ್ಞಾನಗಳ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿರುವ ಅರುಣ್‌ಪ್ರಸಾದ್ ಕುಮಾರ್ ಜರ್ಮನಿಯ ಪ್ರತಿಷ್ಠಿತ ‘ಹಸಿರು ಪ್ರತಿಭೆಗಳ ಪ್ರಶಸ್ತಿ’ ಪಡೆದಿದ್ದಾರೆ.

ಪ್ರಶಸ್ತಿಗಳನ್ನು ಪಡೆದ 27 ಮಂದಿಯ ಪೈಕಿ ಅವರು ಏಕೈಕ ಭಾರತೀಯರಾಗಿದ್ದಾರೆ.

ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯ ‘‘ಗ್ರೀನ್ ಟ್ಯಾಲೆಂಟ್’’ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡುತ್ತಿದ್ದು, ಭೂಗ್ರಹವನ್ನು ಬದುಕಿಗೆ ಸಹ್ಯವಾಗಿಸುವ ನಿಟ್ಟಿನಲ್ಲಿ ನೂತನ ಕಲ್ಪನೆಗಳನ್ನು ಹೊಂದಿರುವ ಜಗತ್ತಿನ ಯುವ ದಾರ್ಶನಿಕರಿಂದ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತದೆ.

‘ಹೈಪರ್‌ಸ್ಪೆಕ್ಟ್ರಲ್ ರಿಮೋಟ್ ಸೆನ್ಸಿಂಗ್’ ಎಂಬ ತಂತ್ರಜ್ಞಾನವನ್ನು ಬಳಸಿ ನೆಡುತೋಪುಗಳ ವರ್ಗೀಕರಣ ಮತ್ತು ಜೈವಿಕ ವಿಭಜನೆ’ಗೆ ಕುಮಾರ್‌ರ ಸಂಶೋಧನೆ ಒತ್ತು ನೀಡುತ್ತದೆ.

‘‘ನಮ್ಮ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವನ್ನು ಕಡಿಮೆ ಮಾಡಲು ನೆಡುತೋಪುಗಳು ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಇದು ಅಂತಿಮವಾಗಿ ಹಸಿರು ವಾತಾವರಣಕ್ಕೆ ಕಾರಣವಾಗುತ್ತದೆ. ಬಿರುಗಾಳಿ, ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪಗಳಿಗೆ ನೆಡುತೋಪುಗಳು ಪ್ರಾಕೃತಿಕ ತಡೆಗಳಾಗುತ್ತವೆ. ನೆಡುತೋಪುಗಳು ಅತ್ಯಂತ ಬಲಿಷ್ಠ ಹಾಗೂ ಸಂಕೀರ್ಣ ಬೇರು ವ್ಯವಸ್ಥೆಯನ್ನು ಹೊಂದಿವೆ. ಈ ಬೇರುಗಳು ಮಣ್ಣನ್ನು ಹಿಡಿದಿಟ್ಟು ಕೊಂಡು ಅದರ ಸಮೀಪ ವಾಸಿಸುವ ಜನರನ್ನು ರಕ್ಷಿಸುತ್ತದೆ. ಇಂಥ ಬೇರು ವ್ಯವಸ್ಥೆಗಳು ಕರಾವಳಿ ಕೊರೆತವನ್ನೂ ತಡೆಯುತ್ತವೆ’’ ಎಂದು ಕುಮಾರ್ ಹೇಳುತ್ತಾರೆ.

Write A Comment