ರಾಷ್ಟ್ರೀಯ

ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ

Pinterest LinkedIn Tumblr

3rainಪುಣೆ/ಚೆನ್ನೈ: ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮುಂದಿನ ಕೆಲವು ದಿನ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಇದರ ಪರಿಣಾಮ ಕರ್ನಾಟಕದ ಕೆಲವೆಡೆ ಭಾನುವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡಿಲ್ಲಿ ಸುರಿಯುತ್ತಿರುವ  ಮಳೆಯ ಪರಿಣಾಮ ಈಗಾಗಲೇ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿಯೂ ಮಳೆಯಾಗಿತ್ತು. ಇನ್ನು ತಮಿಳುನಾಡಿನಲ್ಲಿ ಕಳೆದೆರಡು ವಾರದಿಂದ ಮಳೆಯಿಂದಾಗಿ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ 121 ಮಂದಿ ಮೃತಪಟ್ಟಿದ್ದಾರೆ. ಈಗ ಮತ್ತೊಂದು ಮಳೆ ಎದುರಿಸಲು ಅಲ್ಲಿನ ಜನ ಸಿದ್ಧವಾಗಬೇಕಿದೆ.

ಮುಂದಿನ ಕೆಲವು ದಿನ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವೆಡೆಯೂ ಮಳೆ ಸುರಿಯುವ ಸಾಧ್ಯತೆ ಇದ್ದು, ಈಶಾನ್ಯ ರಾಜ್ಯಗಳನ್ನು ದಟ್ಟು ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Write A Comment