ರಾಷ್ಟ್ರೀಯ

ಮಹಿಳೆಯರೊಂದಿಗೆ ಊಟ ಮಾಡಿದ್ರೆ ಪುರುಷರು ದಪ್ಪ ಆಗ್ತಾರಂತೆ!

Pinterest LinkedIn Tumblr

eat_food

ಮಹಿಳೆಯರೊಂದಿಗೆ ಊಟ ಮಾಡಿದರೆ ಪುರುಷರು ದಪ್ಪಗಾಗುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಪುರುಷರು ತಮ್ಮ ಗೆಳತಿಯರೊಂದಿಗೆ ಊಟ ಮಾಡುವಾಗ ಅವರನ್ನು ಮೆಚ್ಚಿಸಲೋಸುಗ ತುಸು ಜಾಸ್ತಿಯೇ ತಿನ್ನುತ್ತಾರೆ ಎಂದು ಅಮೆರಿಕದ ಕೋರ್ನಲ್ ವಿವಿಯ ಅಧ್ಯಯನ ತಂಡ ಹೇಳಿದೆ.

ಆದಾಗ್ಯೂ, ಪುರುಷರೊಂದಿಗೆಯೇ ಊಟ ಮಾಡುತ್ತಿದ್ದರೆ, ಪುರುಷರು ಈ ಸ್ವಭಾವವನ್ನು ತೋರಿಸುವುದಿಲ್ಲ ಎಂದು ಅಧ್ಯಯನ ತಂಡದ ನೇತೃತ್ವ ವಹಿಸಿದ ಕೇವಿನ್ ಕೆಫಿನ್ ಹೇಳಿದ್ದಾರೆ.   ಎರಡು ವಾರ ಇಟೆಲಿ ರೆಸ್ಟೋರೆಂಟ್ ಒಂದರಲ್ಲಿ  ಊಟ ಮಾಡಲು ಬಂದ ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಮಹಿಳೆಯರ ಜತೆ ಊಟ ಮಾಡುವಾಗು ಪುರುಷರು ಶೇ. 93ರಷ್ಟು ಹೆಚ್ಚು ಪ್ರಮಾಣದಲ್ಲಿ  ಆಹಾರ ಸೇವಿಸುತ್ತಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Write A Comment