ರಾಷ್ಟ್ರೀಯ

ಮಾಜಿ ಪ್ರಧಾನಿ ಇಂದಿರಾ ಗಾಂಧಿ 98ನೇ ಜನ್ಮದಿನ: ದೇಶದ ನಮನ

Pinterest LinkedIn Tumblr

indiraನವದೆಹಲಿ: ಇಂದು ದೇಶಾದ್ಯಂತ ಭಾರತದ ಮೊದಲ ಮಹಿಳಾ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 98ನೇ ಜನ್ಮದಿನವನ್ನಾಚರಿಸಲಾಗುತ್ತಿದೆ.

ಈ ನಿಮಿತ್ತ ನವದೆಹಲಿಯ ಶಕ್ತಿಸ್ಥಳದಲ್ಲಿರುವ ಅವರ ಸಮಾಧಿಗೆ ಭೇಟಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಗೌರವ ನಮನ ಸಲ್ಲಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಇತರ  ನಾಯಕರು ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಮಾರಕಕ್ಕೆ ತೆರಳಿ ಪುಷ್ಪಾಂಜಲಿಯನ್ನು ಅರ್ಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವಿಟ್ಟರ್‌ನಲ್ಲಿ ಇಂದಿರಾ ಗಾಂಧಿಯವರನ್ನು ಸ್ಮರಿಸಿಕೊಂಡಿದ್ದಾರೆ. ‘ಇಂದಿರಾಜಿ ಜನ್ಮದಿನಾಚರಣೆ ನಿಮಿತ್ತ ಅವರಿಗೆ ಗೌರವಗಳನ್ನು ಸಲ್ಲಿಸುತ್ತೇನೆ’, ಎಂದು ಅವರು ಟ್ವೀಟ್ ಮಾಡಿದ್ದಾರೆ.

31 ಅಕ್ಟೋಬರ್, 1984ರಂದು ಇಂದಿರಾ ಹಂತಕರ ಗುಂಡಿಗೆ ಬಲಿಯಾಗಿದ್ದರು.

Write A Comment