ರಾಷ್ಟ್ರೀಯ

ರಾಹುಲ್ ಗಾಂಧಿ ಬ್ರಿಟನ್ ರಾಷ್ಟ್ರೀಯತೆ ಸಂಸತ್ತಿನಲ್ಲಿ ಚರ್ಚೆ: ಬಿಜೆಪಿ

Pinterest LinkedIn Tumblr

bjpppನವದೆಹಲಿ: ಬ್ರಿಟನ್‌ನಲ್ಲಿ ಆರಂಭಿಸಲಾದ ಕಂಪೆನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಬ್ರಿಟನ್ ನಾಗರಿಕತ್ವವನ್ನು ಘೋಷಿಸಿದ್ದರು ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಆರೋಪದ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಬಿಜೆಪಿ ಹೇಳಿಕೆ ನೀಡಿದೆ.

ಸ್ವಾಮಿ ಮಾಡಿರುವ ಆರೋಪಗಳು ತುಂಬಾ ಗಂಭೀರವಾಗಿವೆ. ಅವರು ಬಹಿರಂಗಪಡಿಸಿದ ದಾಖಲೆಗಳು ಕಾನೂನು ಬದ್ಧವಾಗಿದ್ದರೂ ರಾಹುಲ್ ಗಾಂಧಿಯವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಹುಲ್ ಬ್ರಿಟನ್ ನಾಗರಿಕತ್ವ ಕುರಿತಂತೆ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆಯನ್ನು ದೇಶ ಬಯಸುತ್ತಿದೆ ಎಂದು ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

ಸಾರ್ವಜನಿಕವಾಗಿ ಬಹಿರಂಗವಾಗಿರುವ ರಾಹುಲ್ ಗಾಂಧಿಯವರ ವಿಷಯಗಳ ಬಗ್ಗೆ ಬಿಜೆಪಿ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ನೀಡಿದ ಸ್ಪಷ್ಟನೆ ತೃಪ್ತಿಕರವಾಗಿಲ್ಲ. ಆದ್ದರಿಂದ ರಾಹುಲ್ ಗಾಂಧಿ ಸಂಪೂರ್ಣ ಪಾರದರ್ಶಕವಾಗಿರುವಂತಹ ಸ್ಪಷ್ಟನೆ ನೀಡಲಿ. ಸ್ವಾಮಿಯವರ ದಾಖಲೆಗಳು ಕಾನೂನುಬದ್ಧವಾಗಿರುವುದು ಕಂಡು ಬಂದಿರುವುದರಿಂದ ರಾಹುಲ್ ಕೂಡಲೇ ಹೇಳಿಕೆ ನೀಡಲಿ ಎಂದಿದ್ದಾರೆ.

ಏತನ್ಮದ್ಯೆ, ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಲೋಕಸಭಾ ಸಭಾಪತಿ ಸುಮಿತ್ರಾ ಮಹಾಜನ್ ಅವರಿಗೆ ಪತ್ರ ಬರೆದು, ಕೂಡಲೇ ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪತ್ರ ಬರೆದಿದ್ದಾರೆ.

Write A Comment