ರಾಷ್ಟ್ರೀಯ

ಮೋದಿ ಗೋಲ್ಡ್ ಡಿಪಾಸಿಟ್ ಸ್ಕೀಮ್‌ನಲ್ಲಿ ಕೇವಲ 400 ಗ್ರಾಂ ಚಿನ್ನ ಠೇವಣಿ

Pinterest LinkedIn Tumblr

modhiನವದೆಹಲಿ: ಭಾರತೀಯರಿಗೆ ಚಿನ್ನವೆಂದರೆ ಅಚ್ಚುಮೆಚ್ಚು.ಚಿನ್ನವನ್ನು ಕೇವಲ ವಿವಾಹದ ಉಡುಗೊರೆಯಾಗಿ ನೋಡುವುದಲ್ಲದೇ ತಮ್ಮೊಂದಿಗೆ ಸದಾ ಇರಬೇಕು ಎಂದು ಬಯಸುತ್ತಾರೆ. ಅಥವಾ ತೆರಿಗೆ ಸಂಗ್ರಹಗಾರರ ಕಣ್ಣುತಪ್ಪಿಸಲು ಚಿನ್ನವನ್ನು ಖರೀದಿಸುವುದು ಸುಳ್ಳಲ್ಲ.

ಕಳೆದ ಎರಡು ವಾರಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗೋಲ್ಡ್ ಡಿಪಾಸಿಟ್ ಸ್ಕೀಮ್ ಯೋಜನೆ ಜಾರಿಗೆ ತಂದಿದ್ದರು. ದೇಶದಲ್ಲಿ 20 ಸಾವಿರ ಟನ್ ಚಿನ್ನದ ದಾಸ್ತಾನೂ ಇದ್ದರೂ ಯೋಜನೆಯಲ್ಲಿ ಕೇವಲ 400 ಗ್ರಾಂ ಚಿನ್ನ ಜಮಾವಣೆಗೊಂಡಿದೆ.

ದೇಶದ ಜನತೆ ತಮ್ಮಲ್ಲಿರುವ ಚಿನ್ನವನ್ನು ಮತ್ತು ದೇವಾಲಯಗಳಲ್ಲಿರುವ ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ ಬಡ್ಡಿ ಹಣ ಪಡೆಯುವಂತೆ ಕರೆ ನೀಡಿದ್ದರು. ಅದಕ್ಕಾಗಿ ಗೋಲ್ಡ್ ಡಿಪಾಸಿಟ್ ಸ್ಕೀಮ್ ಯೋಜನೆಯ ಬಾಂಡ್‌‌ಗಳನ್ನು ಜಾರಿಗೆ ತಂದಿದ್ದರು.

ಚಿನ್ನವನ್ನು ಸಂಗ್ರಹಿಸುವ ಕೇಂದ್ರಗಳ ಕೊರತೆಯಿಂದಾಗಿ ಜನತೆ ಚಿನ್ನವನ್ನು ಠೇವಣಿ ಮಾಡುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ ಕೇವಲ 400 ಗ್ರಾಂ ಚಿನ್ನ ಠೇವಣಿಯಾಗಿದೆ ಎಂದು ಭಾರತೀಯ ಚಿನ್ನಾಭರಣ ಮತ್ತು ವಜ್ರ ರಫ್ತು ವಹಿವಾಟಿನ ಸಮಿತಿ ಅಧ್ಯಕ್ಷ ಅನಿಲ್ ಸಂಖವಾಲ್ ತಿಳಿಸಿದ್ದಾರೆ.

ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಸಂಖವಾಲ್, ಕೇಂದ್ರ ಸರಕಾರ ಮತ್ತಷ್ಟು ಚಿನ್ನ ಸಂಗ್ರಹಿಸುವ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ ಎಂದರು.

Write A Comment