ರಾಷ್ಟ್ರೀಯ

ಬಾಬಾ ನೂಡಲ್ಸ್‍ಗೆ ತಕರಾರು ! ಆಹಾರ ಸುರಕ್ಷತಾ ಇಲಾಖೆ ಅನುಮತಿಯೇ ಸಿಕ್ಕಿಲ್ಲ ….

Pinterest LinkedIn Tumblr

ramdev

ನವದೆಹಲಿ, ನ.18: ವಿಷಕಾರಿ ಸೀಸದ ಅಂಶ ಜಾಸ್ತಿ ಇದೆ ಎಂಬ ಆರೋಪದಲ್ಲಿ ನಿಷೇಧಕ್ಕೊಳಗಾಗಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಂದಿದ್ದ ಮ್ಯಾಗಿ ನೂಡಲ್ಸ್‍ಗೆ ಪ್ರತಿಯಾಗಿ ಹೊಸಬಗೆಯ ನೂಡಲ್ಸ್ ನ್ನು ಮಾರುಕಟ್ಟೆಗೆ ಪರಿಚಯಿಸಲು ಯೋಗ ಗುರು ಬಾಬಾ ರಾಮ್‍ದೇವ್ ನಿರ್ಧರಿಸಿದ್ದರು. ಆದರೆ, ರಾಮ್‍ದೇವ್ ಈ ಪ್ರಯತ್ನಕ್ಕೆ ಈಗ ಹಿನ್ನಡೆಯಾಗಿದೆ.

ಆಹಾರ ಸುರಕ್ಷತಾ ಇಲಾಖೆ ರಾಮ್‍ದೇವ್ ಪ್ರಕಟಿಸಿರುವ ಹೊಸ ಮಾದರಿಯ ನೂಡಲ್ಸ್‍ಗೆ ಇನ್ನೂ ಅನುಮತಿ ನೀಡಿಲ್ಲ. ಪತಂಜಲಿ ಅಟ್ಟಾ ನೂಡಲ್ಸ್ ಪ್ಯಾಕೆಟ್ ಮೇಲೆ ಲೈಸನ್ಸ್ ನಂಬರ್ ಹಾಕಿದ್ದರೂ ಪೂರ್ಣ ಪ್ರಮಾಣದಲ್ಲಿ ಈ ಬ್ಯ್ರಾಂಡ್‍ಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಎಫ್‍ಎಸ್‍ಎಸ್‍ಎಐ ಅಧ್ಯಕ್ಷ ಆಶೀಶ್ ಬಹುಗುಣ ಹೇಳಿದ್ದಾರೆ.

ಪತಂಜಲಿ ಅಟ್ಟ ನೂಡಲ್ಸ್ ನಮ್ಮಿಂದ ಯಾವುದೇ ಪ್ರಾಡೆಕ್ಟ್ ಅಪ್ರೂವಲ್ ತೆಗೆದುಕೊಂಡಿಲ್ಲ. ಇದು ನಮ್ಮ ಗಮನಕ್ಕೆ ಬಂದಿದೆ. ನಮ್ಮಿಂದ ಅನುಮತಿ ಸಿಗದೆ ಇವರಿಗೆ ಹೇಗೆ ಪರವಾನಿಗೆ ಸಿಕ್ತು’ ಎಂದು ಆಶೀಶ್ ಬಹುಗುಣ ಹೇಳಿದ್ದಾರೆ.ಕಳೆದ ಸೋಮವಾರ ಬಾಬಾ ರಾಮ್‍ದೇವ್ ಹೊಸ ನೂಡಲ್ಸನ್ನು ಬಿಡುಗಡೆ ಮಾಡಿದ್ದರು. ಇನ್ನು, ನಮ್ಮಲ್ಲಿ ಸೂಕ್ತ ದಾಖಲೆಗಳಿದ್ದು, ಅದನ್ನು ನಾಳೆ ನೀಡುತ್ತೇವೆ ಎಂದು ಪತಂಜಲಿ ಆಶ್ರಮದ ವಕ್ತಾರರು ತಿಳಿಸಿದ್ದಾರೆ.

ಇದರ ಮಧ್ಯ ಬಾಬಾ ರಾಮ್‍ದೇವ್ ಅವರು ಯೋಗ ಉಡುಪು ಮಾರಾಟ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಖಾದಿ ಬಟ್ಟೆಗಳಿಂದ ತಯಾರಿಸಲಾದ ವಸ್ತ್ರ ಉಡುಪುಗಳನ್ನು ಸಿದ್ದಪಡಿಸಿ ಮಾರುಕಟ್ಟೆ ಬಿಡಲು ಅವರು ಸಜ್ಜಾಗಿದ್ದಾರೆ.

Write A Comment