ರಾಷ್ಟ್ರೀಯ

ಪತಿ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಬಾಲ್ಕನಿಯಿಂದ ಜಿಗಿದ ಪತ್ನಿ

Pinterest LinkedIn Tumblr

amit_singhನವದೆಹಲಿ: ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸೋಮವಾರ ರಾತ್ರಿ ನೋಯ್ಡಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ದೆಹಲಿ  ಪೊಲೀಸ್ ಸ್ಪೆಷಲ್ ಸೆಲ್‌ನ ಅಸಿಸ್ಟೆಂಟ್ ಕಮಿಷನರ್ ಅಮಿತ್ ಸಿಂಗ್ (34)  ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಣೆಯಲ್ಲಿ ಗುಂಡಿನ ಶಬ್ದ ಕೇಳಿದೊಡನೆ ಅಮಿತ್ ಸಿಂಗ್ ಪತ್ನಿ ಸರಿತಾ ಕೆಳಮಹಡಿಗೆ ಓಡಿ ಹೋಗಿ ಸೆಕ್ಯೂರಿಟಿ ಗಾರ್ಡ್ ಮತ್ತು ನೆರೆಮನೆಯವರನ್ನು ಕರೆದಿದ್ದಾರೆ. ಆಮೇಲೆ ಕೋಣೆಗೆ ಬಂದು ನೋಡಿದಾಗ ಅಮಿತ್ ರಕ್ತದ ಮಡುವಿನಲ್ಲಿದ್ದದ್ದು ಕಂಡು ಬಂದಿದೆ. ಅದನ್ನು ನೋಡಿದ ಕೂಡಲೇ ಸರಿತಾ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ.

ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆಸ್ಪತ್ರೆಗೆ ತಲುಪುವ ವೇಳೆ ಅಮಿತ್ ಸಾವನ್ನಪ್ಪಿದ್ದರು. ಸರಿತಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಅಮಿತ್ ಸಿಂಗ್ ಮತ್ತು ಸರಿತಾ ದಂಪತಿಗಳು ಮೂರು ವರ್ಷದ ಹಿಂದೆ ಮದುವೆಯಾಗಿದ್ದು ಅವರಿಗೆ 18 ತಿಂಗಳ ಮಗು ಇದೆ.

ಇತ್ತೀಚೆಗೆ ದಂಪತಿ ನಡುವೆ ಜಗಳ ನಡೆದಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

ಅಲ್ಲಿ ಏನೆಲ್ಲಾ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅವರಿಗೆ ಒಬ್ಬಳು ಮಗಳಿದ್ದಾಳೆ. ತನಿಖೆ ನಡೆದ ನಂತರವೇ ನಮಗೆ ಈ ಘಟನೆಯ ಬಗ್ಗೆ ಪ್ರತಿಕ್ರಯಿಸಲು ಸಾಧ್ಯ ಎಂದು ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಯಾದವ್ ಹೇಳಿದ್ದಾರೆ.

Write A Comment