ರಾಷ್ಟ್ರೀಯ

ಲಿಫ್ಟ್‌ನಲ್ಲಿ ಸಿಲುಕಿ ಶಾಲಾ ಬಾಲಕಿ ಮೃತ್ಯು

Pinterest LinkedIn Tumblr

Baby___ಹೈದರಾಬಾದ್,ನ.17: ಇಲ್ಲಿಯ ಮಲಕ್‌ಪೇಟ ಪ್ರದೇಶದ ಮೂಸ್ರಾಮಬಾಗ್‌ನ ಖಾಸಗಿ ಶಾಲೆಯೊಂದರ ಲಿಫ್ಟ್‌ನಲ್ಲಿ ಸಿಲುಕಿ ಐದರ ಹರೆಯದ ಬಾಲಕಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಘಟನೆಗೆ ಸಂಬಂಧಪಟ್ಟಂತೆ ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಸ್ಟಾರ್ ಕಿಡ್ಸ್ ಶಾಲೆಯಲ್ಲಿ ಒಂದನೆ ತರಗತಿಯ ವಿದ್ಯಾರ್ಥಿನಿಯಾಗಿದ್ದ ಸಯೀದಾ ಝೈನಬ್ ಝಾಫ್ರಿ ಮೂರನೆ ಅಂತಸ್ತಿನಲ್ಲಿರುವ ತರಗತಿ ಕೊಠಡಿಗೆ ತೆರಳುತ್ತಿದ್ದಾಗ ಲಿಫ್ಟ್‌ನ ಬಾಗಿಲುಗಳ ನಡುವೆ ಸಿಲುಕಿ ಮೃತಪಟ್ಟಿದ್ದಾಳೆ.

ಶಾಲಾಡಳಿತದ ನಿರ್ಲಕ್ಷಕ್ಕಾಗಿ ಅದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೃತ ಬಾಲಕಿಯ ಹೆತ್ತವರು ಮತ್ತು ಬಂಧುಗಳು ಪ್ರತಿಭಟನೆಯನ್ನು ನಡೆಸಿದ್ದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Write A Comment