ರಾಷ್ಟ್ರೀಯ

ಇಸಿಸ್ ಇಸ್ಲಾಂ ಧರ್ಮಕ್ಕೆ ಕಪ್ಪು ಚುಕ್ಕೆ; ಅವರ ಚಟುವಟಿಕೆಗಳನ್ನು ಎಲ್ಲರೂ ಖಂಡಿಸಿ: ಅಸಾದುದ್ದೀನ್ ಒವೈಸಿ ಕರೆ

Pinterest LinkedIn Tumblr

asaduddin

ಹೈದರಾಬಾದ್: ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇಸ್ಲಾಂ ಧರ್ಮಕ್ಕೆ ಕಪ್ಪು ಚುಕ್ಕೆ ಮತ್ತು ಎಲ್ಲರೂ ಅದರ ಚಟುವಟಿಕೆಗಳನ್ನು ಖಂಡಿಸಬೇಕು ಎಂದು ಎಂ ಐ ಎಂ ಅಧ್ಯಕ್ಷ ಅಸಾಸುದ್ದೀನ್ ಒವೈಸಿ ಹೇಳಿದ್ದಾರೆ.

ಈ ಸಂಘಟನೆಯನ್ನು ಧರ್ಮಕ್ಕೆ ತಳುಕು ಹಾಕದೆ ಇದರ ವಿರುದ್ಧ ಹೋರಾಡಲು ವಿಶ್ವ ಸಂಘಟಿತವಾಗಬೇಕು ಎಂದು ಕೂಡ ಹೈದರಾಬಾದ್ ಸಂಸದ ಹೇಳಿದ್ದಾರೆ. ಈ ಉಗ್ರ ಸಂಘಟನೆ ಇಲ್ಲಿಯವರೆಗೂ 1.5 ಲಕ್ಷ ಮುಸ್ಲಿಮರನ್ನು ಕೊಂದು ಹಾಕಿದೆ ಎಂದು ಹೇಳಿರುವ ಒವೈಸಿ, ವಿವಿಧ ಇಸ್ಲಾಂ ಸಂಘಟನೆಯ ಗುರುಗಳು ಇಸ್ಲಾಮಿಕ್ ಸ್ಟೇಟ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ ಎಂದಿದ್ದಾರೆ.

“ನಾವೆಲ್ಲರೂ ಐ ಎಸ್ ಐ ಎಸ್ ಚಟುವಟಿಕೆಗಳನ್ನು ಖಂಡಿಸಬೇಕು ಮತ್ತು ಇದಕ್ಕೂ ಮತ್ತು ಇಸ್ಲಾಂಗೂ ಸಂಬಂಧ ಇಲ್ಲ ಎಂದು ವಿಶ್ವ ತಿಳಿಯಬೆಕು” ಎಂದು ಪ್ಯಾರಿಸ್ ಭಯೋತ್ಪಾದನೆ ದಾಳಿಯ ಬಗ್ಗೆ ಉತ್ತರಪ್ರದೇಶದ ಸಚಿವ ಅಜಂ ಖಾನ್ ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.

ಪ್ಯಾರಿಸ್ ಭಯೋತ್ಪಾದನೆ ಜಾಕತಿಕ ಸೂಪರ್ ಪವರ್ ಗಳಾದ ಅಮೇರಿಕಾ ಮತ್ತು ರಶಿಯಾದ ನೀತಿಗಳ ಪರಿಣಾಮ ಎಂದಿದ್ದ ಅಜಂ ಖಾನ್ “ಇತಿಹಾಸ ಯಾರು ಭಯೋತ್ಪಾದಕ ಎಂದು ನಿರ್ಧರಿಸಲಿದೆ” ಎಂದಿದ್ದರು.

“ಅಜಂ ಖಾನ್ ಭಯೋತ್ಪಾದನೆ ಬಗ್ಗೆ ಪಂಡಿತರಿರಬಹುದು ಆದರೆ ನಾನಲ್ಲ. ಇಸ್ಲಾಂ ಮೇಲೆ ಇಸ್ಲಾಮಿಕ್ ಸ್ಟೇಟ್ ಕಪ್ಪು ಚುಕ್ಕೆ ಎಂದಷ್ಟೇ ನಾನು ನಂಬಿದ್ದೇನೆ. ಎಲ್ಲ ವಿದ್ವಾಂಸರು ಖಂಡಿಸಿದ್ದಾರೆ ಆದುದರಿಂದ ನಾನು ಕೂಡ” ಎಂದು ಒವೈಸಿ ಹೇಳಿದ್ದಾರೆ. ಖಾಲಿಯಾದಾಗಲೆಲ್ಲಾ ಇಂತಹ ಭಯೋತ್ಪಾದಕ ಸಂಘಟನೆಗಳು ತುಂಬಿಕೊಳ್ಳುತ್ತಿವೆ ಎಂದು ಕೂಡ ಸಂಸದ ಹೇಳಿ ಅಮೇರಿಕಾ, ಇರಾಕ್ ಮತ್ತು ಅಪ್ಘಾನಿಸ್ಥಾನದ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿದ್ದಾರೆ.

Write A Comment