ರಾಷ್ಟ್ರೀಯ

ಅಸಹಿಷ್ಣುತೆ ಬೋಧಿಸಿದ್ದಕ್ಕೆ ಗಾಂಧಿ ಹತ್ಯೆ: ಮೋದಿಗೆ ನೆನಪಿಸಿದ ಆಜಂ ಖಾನ್

Pinterest LinkedIn Tumblr

33AJAM

ಗೋರಖ್ಪುರ್,: ಮಹಾತ್ಮಾ ಗಾಂಧಿ ನಾಡು ಭಾರತದಲ್ಲಿ ಅಸಹಿಷ್ಣುತೆಯ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂಗ್ಲೆಂಡ್‌‌ನಲ್ಲಿ ನೀಡಿರುವ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಮುಖಂಡ, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಆಜಂ ಖಾನ್ ತೀವ್ರವಾಗಿ ಖಂಡಿಸಿದ್ದಾರೆ. ಜತೆಗೆ ಸಹಿಷ್ಣುತೆಯನ್ನು ಬೋಧಿಸಿದ್ದಕ್ಕಾಗಿ ಬಿಜೆಪಿಯ ಸೈದ್ಧಾಂತಿಕ ಗುರುವಾದ ಆರ್‌ಎಸ್‌ಎಸ್‌‌ನ ಕಾರ್ಯಕರ್ತರೇ ಮಹಾತ್ಮ ಗಾಂಧಿಯನ್ನು  ಹತ್ಯೆಗೈದಿರುವಾಗ, ಗಾಂಧಿ ಹೆಸರನ್ನು ಮೋದಿ ಹೇಗೆ ಬಳಸಿದರು ಎಂದು ಆಜಂ ಖಾನ್ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಕುರಿತು ವಿದೇಶದ ಜನರು ಪ್ರಧಾನಿಯಿಂದ ಪ್ರಾಮಾಣಿಕ ಉತ್ತರವನ್ನು ಬಯಸುತ್ತಿದ್ದಾರೆ.  ಆದರೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವರು  ಬುದ್ಧಿಸ್ಂ ಮತ್ತು ಗಾಂಧಿಸ್ಂ ನ್ನು ಬಳಸಿದರು. ಆದರೆ ದೇಶದಲ್ಲಿ ಬುದ್ಧಿಸ್ಂ  ಪ್ರಸಾರವಾಗಲು ಪ್ರಾರಂಭವಾದಾಗ ಬೌದ್ಧರನ್ನು ಕೊಲ್ಲಲಾಯಿತು. ಸಂಘ ಗಾಂಧಿಯವರಿಗೆ ಏನನ್ನು ಮಾಡಿತು ಎಂಬುದು ಸಹ ನಿಮಗೆ ತಿಳಿದಿರುವುದೇ. ಇದು ಸಮರ್ಪಕ ಉತ್ತರವಲ್ಲ. ಜಗತ್ತು ಒಪ್ಪುವಂತಹ ಉತ್ತರವನ್ನು ಅವರು ನೀಡಬೇಕು  ಎಂದು ಅವರು ಆಗ್ರಹಿಸಿದ್ದಾರೆ.

ಭಾರತದಲ್ಲಿ ಅಸಹಿಷ್ಣುತೆ ಬಗ್ಗೆ ಇಂಗ್ಲೆಂಡ್‌ನಲ್ಲಿ ಮಾತನಾಡುತ್ತಿದ್ದ ಮೋದಿಯವರು, ಭಾರತ ಮಹಾತ್ಮಾ ಗಾಂಧಿ ಮತ್ತು ಬುದ್ಧನ ನಾಡು. ದೇಶದಲ್ಲಿ ಅಸಹಿಷ್ಣುತೆಯ ಪ್ರಶ್ನೆಯೇ ಇಲ್ಲ. ಯಾವ ಸಂದರ್ಬದಲ್ಲೂ ನಾವು ಅಸಹಿಷ್ಣುತೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದಿದ್ದರು.

Write A Comment