ರಾಷ್ಟ್ರೀಯ

ಈ ಕೋಣದ ಬೆಲೆ ಬರೊಬ್ಬರಿ 7 ಕೋಟಿ

Pinterest LinkedIn Tumblr

11kona

ಹೈದರಾಬಾದ್: ಹೈದರಾಬಾದ್‌ನಲ್ಲಿ ನಡೆಯುತ್ತಿರುವ ‘ಸದರ್ ಉತ್ಸವ್’ದಲ್ಲಿ ಪಶುಮೇಳ ನಡೆಯುತ್ತಿದ್ದು ಬರೋಬ್ಬರಿ 1400 ತೂಕದ, 7 ಕೋಟಿ ಬೆಲೆಬಾಳುವ ಕೋಣವೊಂದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಮುರ್ರಾ ತಳಿಯ ಈ ಕೋಣದ ಹೆಸರು ಯುವರಾಜ. 14 ಅಡಿ ಉದ್ದ 6 ಅಡಿ ಎತ್ತರದ ಈ ಕೋಣ ಹಲವು ವಿಶೇಷತೆಗಳನ್ನು ಹೊಂದಿದೆ. ಹರ್ಯಾಣದ ಕರಮವೀರ ಈ ಕೋಣದ ಮಾಲೀಕ. ವಿದೇಶದಲ್ಲೂ ಅನೇಕ ಪ್ರದರ್ಶಗಳನ್ನು ನೀಡಿರುವ ಯುವರಾಜ 12 ಬಾರಿ ಚಾಂಪಿಯನ್ ಪಟ್ಟ ಧರಿಸಿದೆಯಂತೆ. ಹವಾ ನಿಯಂತ್ರಿತ ಕೋಣೆಯಲ್ಲಿ ಆತನನ್ನು ಸಾಕಲಾಗುತ್ತದೆಯಂತೆ. ದಿನವೊಂದಕ್ಕೆ 20 ಲೀಟರ್ ಹಾಲು, 5 ಕಿಲೋ ಸೇಬು ಮತ್ತು 15 ಕೆ.ಜಿ ಆಹಾರವನ್ನು ತಿನ್ನುವ ಇದು ಒಂದು ಬಾಟಲ್ ಕಂಟ್ರಿ ಲಿಕ್ಕರನ್ನು ಸಹ ಕುಡಿಯುತ್ತದೆಯಂತೆ.

ಕೋಣಕ್ಕೆ ದಿನವೊದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುವ ಮಾಲೀಕ ವರ್ಷಕ್ಕೆ ಯುವರಾಜನಿಂದ ಪಡೆಯುವ ಆದಾಯ ಬರೊಬ್ಬರಿ 1 ಕೋಟಿಯಂತೆ.
ಕೃತಕ ಗರ್ಭಧಾರಣೆಗೆ ಈತನ ವೀರ್ಯವನ್ನು ಬಳಸಲಾಗುತ್ತದೆಯಂತೆ.

ಪ್ರತಿ ವರ್ಷ ದೀಪಾವಳಿಯ ಎರಡನೇ ದಿನ ಹೈದರಾಬಾದಿನಲ್ಲಿ  ನಡೆಯುವ ಈ ಜಾತ್ರೆಯಲ್ಲಿ  ಪ್ರತಿಷ್ಠೆಯ ಪ್ರತೀಕವಾಗಿ ಎಮ್ಮೆಗಳ ಪ್ರದರ್ಶನ, ಮಾರಾಟ  ಖರೀದಿ ನಡೆಯುತ್ತದೆ. ಯಾದವ ಸಮುದಾಯದದವರು ನಡೆಸುವ ಈ ಮೇಳದಲ್ಲಿ  ಎಮ್ಮೆಗಳಿಗೆ ಹೂ ಹಾರಗಳನ್ನು ಹಾಕಿ, ಅದರ ಕೋಡುಗಳಿಗೆ ಬಣ್ಣಹಚ್ಚಿ ಶೃಂಗರಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುತ್ತದೆ.  ಆದರೆ ತನ್ನ ಕೋಣವನ್ನು ಮಾರಾಟ ಮಾಡಲು ನಿರಾಕರಿಸಿರುವ ಸಿಂಗ್, ‘ಆತ ನನ್ನ ಮಗನಂತೆ, ಆತನನ್ನು ಅದೇ ಮಮತೆಯಿಂದ ಸಾಕಿದ್ದೇನೆ’, ಎನ್ನುತ್ತಾನೆ.

Write A Comment