ರಾಷ್ಟ್ರೀಯ

ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದರು

Pinterest LinkedIn Tumblr

22 KAMAL

ನವದೆಹಲಿ: ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಬಿಜೆಪಿ ಇಕ್ಕಟ್ಟಿನ ಸ್ಥಿತಿಗೆ ತಲುಪಿದೆ. ಬಿಜೆಪಿ ಸಂಸದರಾದ ಮನೋಜ್ ತಿವಾರಿ ಮತ್ತು ಆರ್‌.ಕೆ.ಸಿಂಗ್ ಪಕ್ಷದ ಹೈಕಮಾಂಡ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಬಿಹಾರ್ ಚುನಾವಣೆ ಸೋಲಿಗೆ ಯಾವ ಅಂಶಗಳು ಕಾರಣವಾದವು? ಅವುಗಳಿಗೆ ಯಾರು ಹೊಣೆ? ಹೊಣೆಯಾಗಿದ್ದವರನ್ನು ಶಿಕ್ಷಿಸಬೇಕು ಎನ್ನುವುದೇ ಆಡ್ವಾಣಿ ಬೆಂಬಲಿಗರ ನಿಲುವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಮಾಜಿ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಆರ್‌.ಕೆ.ಸಿಂಗ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿಯೇ ಅಪರಾಧಿಗಳಿಗೆ ಟಿಕೆಟ್ ನೀಡಬೇಡಿ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ.ಗಂಬೀರ ಅಪರಾಧಗಳನ್ನು ಎದುರಿಸುತ್ತಿರುವವರಿಗೆ ಟಿಕೆಟ್ ನೀಡಲಾಯಿತು ಎಂದು ಆರೋಪಿಸಿದರು.

ನಾವು ಇತರ ಪಕ್ಷಗಳಿಗಿಂತ ಭಿನ್ನವಾಗಿದ್ದೇವೆ ಎಂದು ಭಾವಿಸುತ್ತೇವೆ. ಪಾರದರ್ಶಕ ಸರಕಾರ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತೇವೆ. ಆದರೆ, ಬಿಜೆಪಿ ಹೈಕಮಾಂಡ್ ಅಪರಾಧಿಗಳಿಗೆ ಟಿಕೆಟ್ ನೀಡಿರುವುದು ತುಂಬಾ ಕೆಟ್ಟ ಸಂಗತಿ ಮತ್ತು ವಿಷಾದನೀಯ ಎಂದು ಹೇಳಿದ್ದಾರೆ.

ಬಿಹಾರ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ಬಿಜೆಪಿ ಸಂಸದ ಮನೋಜ್ ತಿವಾರಿ, ಜನತಾ ಪರಿವಾರದ ಚುನಾವಣಾ ತಂತ್ರ ನಮಗಿಂತ ಉತ್ತಮವಾಗಿತ್ತು ಎಂದು ತಿಳಿಸಿದ್ದಾರೆ.

Write A Comment