ರಾಷ್ಟ್ರೀಯ

ಇಂದಿನಿಂದ 3 ದಿನಗಳ ಕಾಲ ಬ್ರಿಟನ್ ಪ್ರವಾಸ ಕೈಗೊಳ್ಳಲಿರುವ ಮೋದಿ

Pinterest LinkedIn Tumblr

britan

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿದ ಮೂರು ದಿನಗಳ ಕಾಲ ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದು, ಈ ಬಾರಿ ದೀಪಾವಳಿಯನ್ನು ಲಂಡನ್ ಭಾರತೀಯರ ಜತೆ ಆಚರಿಸಲಿದ್ದಾರೆ.

ಇಂದು ಬ್ರಿಟನ್​ಗೆ ತೆರಳಲಿರುವ ಮೋದಿ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಬ್ರಿಟನ್ ಸಂಸದರು, ಸ್ವೀಕರ್ ಜತೆ ಮಾತುಕತೆ ನಡೆಸಲಿದ್ದು, ಪ್ರಧಾನಿ ಡೇವಿಡ್ ಕೆಮರೂನ್ ಜತೆ ಚರ್ಚೆ ನಡೆಸಲಿದ್ದಾರೆ. ಮೋದಿ ಅವರಿಗೆ ಒಲಿಂಪಿಕ್ಸ್ ಮಾದರಿಯಲ್ಲಿ ಅದ್ದೂರಿ ಸ್ವಾಗತ ನೀಡಲು ಲಂಡನ್ ನಲ್ಲಿ ಭರದ ತಯಾರಿ ನಡೆದಿದೆ.

ನವೆಂಬರ್ 13ರಂದು ಟಾಟಾ ಮೋಟಾರ್ಸ್ ಮಾಲೀಕತ್ವದ ಜಾಗ್ವಾರ್, ಲ್ಯಾಂಡ್ ರೋವರ್ ಕಾರು ತಯಾರಿಕಾ ಕಂಪನಿಗೆ ಭೇಟಿ ನೀಡಲಿದ್ದಾರೆ. ಸಂಜೆ ವೆಂಬ್ಲೆ ಸ್ಲೇಡಿಯಂನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್ 14ರಂದು ಥೇಮ್ಸ್ ನದಿ ತಟದಲ್ಲಿ ಸ್ಥಾಪಿಸಿರುವ ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಲಿದ್ದಾರೆ.

Write A Comment