ರಾಷ್ಟ್ರೀಯ

ಸಬ್‌-ಇನ್ಸ್‌ಪೆಕ್ಟರ್ ರನ್ನು ಹತ್ಯೆ ಮಾಡಿದ ಜೂಜುಕೋರರು

Pinterest LinkedIn Tumblr

murder1

ಕೂಚ್ ಬೆಹರ್: ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್ ಪೆಕ್ಟರ್ ರನ್ನು ಜೂಜುಕೋರರ ತಂಡ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹರ್ ಎಂಬಲ್ಲಿ ನಡೆದಿದೆ.

ಕೋಟ್ವಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಂಜಿತ್ ಪಾಲ್ ಮೃತಪಟ್ಟವರು. ಕಾಳಿ ಪೂಜೆ ಅಂಗವಾಗಿ ಕೂಚ್ ಬೆಹರ್ ಮೊದಲನೇ ಬ್ಲಾಕ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಲ್ಲೇ ಮೂವರು ಜೂಜು ಆಡುತ್ತಿರುವುದು ಪೊಲೀಸರ ಕಣ್ಣಿಗೆ ಬಿದ್ದಿದೆ. ಇದನ್ನು ಗಮನಿಸದ ಪೊಲೀಸರು ಅವರ ಬಳಿ ತೆರಳುತ್ತಿದ್ದಂತೆ ಆ ಮೂವರು ಜೂಜುಕೋರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಸಾವನ್ನಪ್ಪಿದ್ದು, ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾಯಿಸಲಾಗಿದ್ದು, ಇಬ್ಬರು ಪೇದೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹತ್ಯೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment