ರಾಷ್ಟ್ರೀಯ

ಪ್ರಧಾನಿ ಮೋದಿಯನ್ನು ‘ಪಾತಕಿ’ ಎಂದಿದ್ದ ಸಚಿವ ಅಜಂ ಖಾನ್ ವಿರುದ್ಧ ಕಾನ್ಪುರ ನ್ಯಾಯಾಲಯದಲ್ಲಿ ದೂರು ದಾಖಲು

Pinterest LinkedIn Tumblr

azam-modi

ಲಕನೌ: ವಿಶ್ವದ ಮೊದಲ 10 ಪಾತಕಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದಿದ್ದ ಉತ್ತರಪ್ರದೇಶದ ಸಂಪುಟ ಸಚಿವ ಅಜಂ ಖಾನ್ ವಿರುದ್ಧ ಕಾನ್ಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

ಜಲ ನಿಗಮದ ನಿವೃತ್ತ ಎಂಜಿನಿಯರ್ ರಾಮ್ ಸೇವಕ್ ಶುಕ್ಲಾ ಅವರು ಈ ಆಪಾದನೆ ಮಾಡಿ ನಗರದ ಮೆಜೆಸ್ಟ್ರೆಟ್ ನ್ಯಾಯಾಲಯಕ್ಕೆ ಸಾಕ್ಷ್ಯ ಹೇಳಿದ್ದಾರೆ.

ಮೋದಿಯವರನ್ನು ಪಾತಕಿಯೆಂದು ಕರೆದು ಅಜಂ ಖಾನ್ ಸಾಂವಿಧಾನಕ ಹುದ್ದೆಗೆ ಅವಮಾನ ಮಾಡಿರುವುದಲ್ಲದೆ ಲಕ್ಷಾಂತರ ಜನರ ಭಾವನೆಯನ್ನು ಘಾಸಿಗೊಳಿಸಿದ್ದಾರೆ ಎಂದು ಶುಕ್ಲಾ ಆರೋಪಿಸಿದ್ದಾರೆ.

ಪ್ರಧಾನಿ ವಿಶ್ವ ದರ್ಜೆಯ ಪಾತಕಿ ಎಂದು ಜುಲೈ ೨೨ ನೆ ತಾರೀಕು ಎಂದು ಹೇಳಿದ್ದರು ಎಂದು ದೂರಿ ಅದಕ್ಕೆ ಪೂರಕವಾಗಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯ ತುಣುಕನ್ನೂ ಒದಗಿಸಿದ್ದಾರೆ.

ತಮ್ಮ ವಕೀಲರ ಮೂಲಕ ಸಚಿವರಿಗೆ ನೋಟಿಸ್ ಜಾರಿ ಮಾಡಿದ್ದರೂ ಅದಕ್ಕೆ ಅವರು ಪ್ರತಿಕ್ರಿಯಿಸಿಲ್ಲ ಎಂದು ಕೂಡ ದೂರಿದ್ದರೆ. ಮುಂದಿನ ವಿಚಾರಣೆ ನವೆಂಬರ್ ೧೭ಕ್ಕೆ ಮುಂದೂಡಲಾಗಿದೆ.

Write A Comment