ರಾಷ್ಟ್ರೀಯ

ಬಿಹಾರದಲ್ಲಿ ಬಿಜೆಪಿಯ ‘ಗೋವು’ ಜಾಹೀರಾತಿನ ವಿರುದ್ಧ ಕಿಡಿಕಾರಿದ ಮಹಾಮೈತ್ರಿಕೂಟ

Pinterest LinkedIn Tumblr

BJPಪಾಟ್ನಾ, ನ.4: ಬಿಹಾರದಲ್ಲಿ ಅಂತಿಮ ಹಂತದ ಮತದಾನಕ್ಕೆ ಮುನ್ನಾ ದಿನವಾದ ಬುಧವಾರ ವೃತ್ತಪತ್ರಿಕೆ ಗಳಲ್ಲಿ ಕಾಣಿಸಿಕೊಂಡಬಿಜೆಪಿಯ ಜಾಹೀರಾತು ಮಹಾ ಮೈತ್ರಿಕೂಟವನ್ನು ಕೆಂಡಾಮಂಡಲವಾಗಿಸಿದೆ. ಗೋಹತ್ಯೆ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಪ್ರಶ್ನೆಗಳ ಸರಮಾಲೆಯನ್ನೇ ಒಡ್ಡಿರುವ ಈ ಜಾಹೀರಾತು ವಿವಾದವನ್ನು ಸೃಷ್ಟಿಸಿದ್ದು, ಬಿಜೆಪಿಯು ಚುನಾವಣೆಗೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ವಿರೋ ಪಾಳಯವು ಆರೋಪಿಸಿದೆ.

ಆಕಳನ್ನು ತಬ್ಬಿಕೊಂಡಿರುವ ಮಹಿಳೆಯ ಚಿತ್ರವನ್ನು ಹೊಂದಿರುವ ಈ ಜಾಹೀರಾತು ಹಿಂದೂಗಳೂ ದನದ ಮಾಂಸ ತಿನ್ನುತ್ತಾರೆ ಎಂಬ ಮಿತ್ರ ಲಾಲು ಪ್ರಸಾದ ಯಾದವ್ ಹೇಳಿಕೆಯ ಬಗ್ಗೆ ನಿತೀಶ್ ವೌನವನ್ನು ಪ್ರಶ್ನಿಸಿದೆ. ಲಾಲು ಹೇಳಿಕೆಯು ‘ಎಲ್ಲ ಭಾರತೀಯರಿಗೆ ಪೂಜನೀಯ’ವಾಗಿರುವ ಗೋವನ್ನು ಅವಮಾನಿಸಿದೆ ಎಂದು ಅದು ಹೇಳಿದೆ.

ವೋಟ್ ಬ್ಯಾಂಕ್ ರಾಜಕಾರಣವನ್ನು ನಿಲ್ಲಿಸಿ ಮತ್ತು ಈ ಹೇಳಿಕೆಗಳನ್ನು ನೀವು ಒಪ್ಪುತ್ತೀರಾ ಎನ್ನುವುದನ್ನು ವಿವರಿಸಿ ಎಂದಿರುವ ಜಾಹೀರಾತು, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ ಮತ್ತು ಇತರರ ಮೂರು ಹೇಳಿಕೆಗಳನ್ನು ಪಟ್ಟಿ ಮಾಡಿದೆ. ಪ್ರತಿ ಹೇಳಿಕೆಯಲ್ಲಿಯೂ ಬ್ೀ ಎಂಬ ಶಬ್ದವನ್ನು ಕೆಂಪು ವರ್ಣದಲ್ಲಿ ಮುದ್ರಿಸಲಾಗಿದೆ.

ಗುರುವಾರ ಬಿಹಾರದ 57 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ಜಾಹೀರಾತು ಮತಗಳನ್ನು ಯಾಚಿಸಲು ಧರ್ಮದ ಬಳಕೆಯನ್ನು ಸ್ಪಷ್ಟವಾಗಿ ನಿಷೇಸಿರುವ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಸಿದೆ ಎಂದು ಬಿಜೆಪಿ ವಿರುದ್ಧದ ಮಹಾ ಮೈತ್ರಿಕೂಟದ ನಾಯಕರು ಆಪಾದಿಸಿದ್ದಾರೆ.

ಈ ಜಾಹೀರಾತಿನ ವಿರುದ್ಧ ನಾವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ ಎಂದು ತಿಳಿಸಿದ ಜೆಡಿಯು ನಾಯಕ ಕೆ.ಸಿ.ತ್ಯಾಗಿ ಅವರು, ಬಿಜೆಪಿ ವಿರುದ್ಧ ಈ ಹಿಂದೆ ಸಲ್ಲಿಸಲಾಗಿದ್ದ ದೂರುಗಳ ಕುರಿತಂತೆ ಆಯೋಗವು ‘ಉದಾರ ನಿಲುವು’ ತಳೆದಿದೆ ಎಂದು ಹೇಳಿದರು.

Write A Comment