ಅಂತರಾಷ್ಟ್ರೀಯ

ಶಾರೂಕ್ ಖಾನ್ ಪಾಕಿಸ್ತಾನಕ್ಕೆ ಬಂದು ನೆಲೆಸಲು ಆಹ್ವಾನ ನೀಡಿದ ಉಗ್ರ ಹಫೀಜ್ ಸಯೀದ್ !

Pinterest LinkedIn Tumblr

sharuk

ನವದಹೆಲಿ: ಬಾಲಿವುಡ್ ಬಾದ್ ಶಾ ಸೂಪರ್ ಸ್ಟಾರ್ ಶಾರೂಕ್ ಖಾನ್ ಪಾಕಿಸ್ತಾನಕ್ಕೆ ಬಂದು ನೆಲೆಸಲಿ ಎಂದು ಭಾರತದ ಮೋಸ್ಟ್ ವಾಂಟೆಂಡ್ ಉಗ್ರ ಹಫೀಜ್ ಸಯೀದ್ ಆಹ್ವಾನ ನೀಡಿದ್ದಾನೆ.

ನಟ ಶಾರುಖ್ ಖಾನ್ ಮಾತ್ರವಲ್ಲದೇ ಕ್ರೀಡೆ, ಸಂಸ್ಕೃತಿ, ಕಲೆ ಮತ್ತಿತರ ಕ್ಷೇತ್ರಗಳಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಮುಸ್ಲಿಮರು ತೊಂದರೆ ಅನುಭವಿಸುತ್ತಿದ್ದಲ್ಲಿ, ತಾರತಮ್ಯ ಎದುರಿಸುತ್ತಿದ್ದಲ್ಲಿ ಪಾಕಿಸ್ತಾನಕ್ಕೆ ಬಂದು ನೆಲೆಸಬಹುದು ಎಂದು ಉಗ್ರ ಹಫೀಜ್ ಸಯೀದ್ ಕರೆ ನೀಡಿದ್ದಾನೆ.

ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಉಗ್ರ ಸಯೀದ್ ಹಫೀಜ್ ಶಾರುಖ್ ಸೇರಿ ಅನೇಕ ಮುಸ್ಲಿಮರು ಧಾರ್ಮಿಕ ಕಾರಣಗಳಿಗಾಗಿ ಭಾರತದಲ್ಲಿ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾನೆ.

ಶಾರುಕ್ ಖಾನ್ ಭಾರತದಲ್ಲಿದ್ದಾರೆ. ಆದರೆ ಅವರ ಮನಸು ಪಾಕಿಸ್ತಾನದಲ್ಲಿದೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಆರೋಪಿಸಿದ್ದರು. ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ನಟ ಶಾರೂಕ್ ಖಾನ್ ನೀಡಿದ್ದ ಹೇಳಿಕೆಗೆ ಕೈಲಾಶ್ ವಿಜಯವರ್ಗೀಯ ಪ್ರತಿಕ್ರಿಯಿಸಿದ್ದಾರೆ.

Write A Comment