ಮನೋರಂಜನೆ

ಶಾರುಖ್ ಖಾನ್‌ ಪಾಕ್ ಏಜೆಂಟ್…ಅವರು ಪಾಕಿಸ್ತಾನಕ್ಕೇ ಹೋಗಲಿ: ಸಾಧ್ವಿ ಪ್ರಾಚಿ ಆರೋಪ…ಶಾರುಖ್ ಖಾನ್ ವಿರುದ್ಧ ಗರಂ ಆದದ್ದು ಏಕೆ ಗೊತ್ತ..?

Pinterest LinkedIn Tumblr

Sadhvi-Prachi-Shah-Rukh

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ ಶಾರುಖ್ ಖಾನ್ ಪಾಕಿಸ್ತಾನದ ಏಜೆಂಟ್ ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ನಾಯಕಿ ಸಾಧ್ವಿ ಪ್ರಾಚಿ ಆರೋಪಿಸಿದ್ದಾರೆ.

ಸೋಮವಾರ ತಮ್ಮ 50ನೇ ಹುಟ್ಟುಹಬ್ಬವನ್ನಾಚರಿಸಿದ ಶಾರುಖ್ ಖಾನ್ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿದ್ದರು. ಕಿಂಗ್ ಖಾನ್ ಹೇಳಿಕೆಗೆ ಪ್ರತಿಕ್ರಯಿಸಿದ ಸಾಧ್ವಿ, ಶಾರುಖ್ ಪಾಕ್ ಏಜೆಂಟ್, ಅವರು ಪಾಕಿಸ್ತಾನಕ್ಕೇ ಹೋಗಲಿ ಎಂದು ಗುಡುಗಿದ್ದಾರೆ.

ಪ್ರಶಸ್ತಿ ಪಾಪಸ್ ಮಾಡುತ್ತೇನೆ ಎಂದು ಹೇಳುವ ಮೂಲಕ ಶಾರುಖ್ ದೇಶದ್ರೋಹವೆಸಗಿದ್ದಾರೆ. ಇದಕ್ಕಾಗಿ ಅವರಿಗೆ ಶಿಕ್ಷೆಯಾಗಬೇಕು. ಶಾರುಖ್ ಖಾನ್ ಮಾತ್ರವಲ್ಲ, ಪ್ರಶಸ್ತಿ ವಾಪಸ್ ಮಾಡುತ್ತಿರುವವರೆಲ್ಲರೂ ದೇಶದ್ರೋಹವೆಸಗುತ್ತಿದ್ದಾರೆ ಎಂದು ಸಾಧ್ವಿ ಹೇಳಿದ್ದಾರೆ.

ಸಾಧ್ವಿ ಈ ತರ ಸಿನಿಮಾರಂಗದ ವಿರುದ್ಧ ಗುಡುಗಿದ್ದು ಇದು ಮೊದಲೇನೂ ಇಲ್ಲ. ಈ ಹಿಂದೆ ಅವರು ಅಮೀರ್‌ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್‌ರ ಚಿತ್ರಗಳಿಗೆ ನಿಷೇಧ ಹೇರಬೇಕು, ಅವರ ಸಿನಿಮಾ ಪೋಸ್ಟರ್‌ಗಳನ್ನು ಹರಿದು ಹಾಕಬೇಕೆಂದು ಆದೇಶ ನೀಡಿದ್ದರು.

Write A Comment