ರಾಷ್ಟ್ರೀಯ

ಮೋದಿ ವಿರುದ್ಧ ಟೀಕಿಸಿದ ಅರುಣ್ ಶೌರಿ ಬಿಜೆಪಿ ಸದಸ್ಯರಾಗಿ ಉಳಿದಿಲ್ಲ: ಬಿಜೆಪಿ

Pinterest LinkedIn Tumblr

arunನವದೆಹಲಿ: ಪ್ರಧಾನಮಂತ್ರಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಅರುಣ್ ಶೌರಿ ಬಿಜೆಪಿ ಪಕ್ಷದ ಸದಸ್ಯರಾಗಿ ಉಳಿದಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.

ಹಿಂದಿನ ಎನ್‌ಡಿಎ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಅರುಣ್ ಶೌರಿ ಹೇಳಿಕೆಯನ್ನು, ಬಿಜೆಪಿ ತಳ್ಳಿಹಾಕಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಬಿಜೆಪಿ ಸದಸ್ಯರು ಪ್ರತಿ ಆರು ವರ್ಷಗಳಿಗೊಮ್ಮೆ ತಮ್ಮ ಸದಸ್ಯತ್ವವನ್ನು ಪರಿಷ್ಕರಣೆಗೊಳಿಸಬೇಕು. ಸದಸ್ಯತ್ವದ ಅಭಿಯಾನದ ಸಂದರ್ಭದಲ್ಲಿ ಅರುಣ್ ಶೌರಿ ತಮ್ಮ ಸದಸ್ಯತ್ವವನ್ನು ನವೀಕರಣಗೊಳಿಸಲಿಲ್ಲವಾದ್ದರಿಂದ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಅರುಣ್ ಶೌರಿ ಆರೋಪಗಳನ್ನು ತಳ್ಳಿಹಾಕಿ, ಇಂತಹ ಆರೋಪಗಳನ್ನು ಬಿಜೆಪಿಯಾಗಲಿ ಅಥವಾ ಸಾರ್ವಜನಿಕರಾಗಲಿ ಹಂಚಿಕೊಳ್ಳಲು ಸಿದ್ದರಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಕಟ್ಟಾ ಬೆಂಬಲಿಗರಾಗಿದ್ದ ಅರುಣ್ ಶೌರಿ, ಆರ್ಥಿಕತೆಯನ್ನು ಸದೃಡಗೊಳಿಸಬೇಕು ಎಂದರೆ ಹೆಡ್‌ಲೈನ್‌‌ನಲ್ಲಿ ಮಿಂಚಬೇಕು ಎನ್ನುವಂತೆ ಮೋದಿ ಸರಕಾರ ವರ್ತಿಸುತ್ತಿರುವುದರಿಂದ, ಜನತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರವಧಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Write A Comment