ಫರೀದಾಬಾದ್: 10 ವರ್ಷ ವಯಸ್ಸಿನ ಬಾಲೆಯ ಮೇಲೆ ಯುವಕನೊಬ್ಬ ದೇವಾಲಯದ ಆವರಣದಲ್ಲಿಯೇ ಅತ್ಯಾಚಾರವೆಸಗಿದ ಹೇಯ ಘಟನೆ ಸೆಕ್ಟರ್-22ರಲ್ಲಿ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈಷ್ಣೋದೇವಿ ದೇವಾಲಯದ ಆವರಣದಲ್ಲಿರುವ ಕೋಣೆಯಲ್ಲಿ ವಾಸಿಸುತ್ತಾ ಡ್ರಮ್ಮರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಂಟಿ ಎನ್ನುವ ಆರೋಪಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ದೇವಾಲಯದ ಅರ್ಚಕನೊಬ್ಬ ಬಾಲಕಿಗೆ ಮೂರ್ತಿಗಳ ಮೇಲಿರುವ ಕೆಲ ಬಟ್ಟೆಯ ವಸ್ತುಗಳನ್ನು ನೀಡಿ ಮೊದಲ ಮಹಡಿಯಲ್ಲಿರುವ ಕೋಣೆಯಲ್ಲಿಡಲು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಬಾಲಕಿಯನ್ನು ಹಿಂಬಾಲಿಸಿದ ಆರೋಪಿ, ಕೋಣೆಯಲ್ಲಿಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಬಾಲಕಿ ಜೋರಾಗಿ ಕೂಗುತ್ತಿರುವುದರಿಂದ ಬೆದರಿದ ಆರೋಪಿ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಜೀವ ತೆಗೆಯುತ್ತೇನೆ ಎಂದು ಬೆದರಿಸಿ ಪರಾರಿಯಾಗಿದ್ದಾನೆ.
ಆರೋಪಿ ಬಂಟಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.