ರಾಷ್ಟ್ರೀಯ

ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ ! ಚಿನ್ನದ ದರ ಇಳಿಮುಖ

Pinterest LinkedIn Tumblr

Deepavali Gold prices

ನವದೆಹಲಿ: ಆಭರಣ ತಯಾರಕರು ಹೆಚ್ಚಿನ ಖರೀದಿಗೆ ಮುಂದಾಗದಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನ ಶನಿವಾರವೂ ಚಿನ್ನದ ದರ ಇಳಿಮುಖ ಕಂಡಿದೆ.

ಪ್ರತಿ ಹತ್ತು ಗ್ರಾಂ ದರದಲ್ಲಿ ರು.110 ಇಳಿಕೆ ಕಂಡು ರು.27,090ಕ್ಕೆ ತಲುಪಿತು. ಕೈಗಾರಿಕೆ ಮತ್ತು ನಾಣ್ಯ ತಯಾರಕರು ಬೆಳ್ಳಿ ಖರೀದಿಗೆ ಮುಂದಾಗದಿದ್ದರಿಂದ ಪ್ರತಿ ಕೆಜಿ ದರ ರು.235 ಇಳಿಕೆ ಕಂಡು ರು.37,050ಗೆ ತಲುಪಿತು.

ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟು ಮತ್ತು ಆಭರಣ ತಯಾರಕರು ದೂರ ಉಳಿದಿದ್ದರಿಂರಿಂದ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖ ಕಂಡಿವೆ ಚಿನಿವಾರ ಪೇಟೆ ವಿಶ್ಲೇಷಕರು ಹೇಳಿದ್ದಾರೆ.

Write A Comment