ರಾಷ್ಟ್ರೀಯ

ದಾದ್ರಿಯಂತಹ ಸಣ್ಣ ಘಟನೆಗಳಿಂದ ಹಿಂದು ಸಂಸ್ಕ್ರತಿಗೆ ಧಕ್ಕೆಯಿಲ್ಲ: ಭಾಗವತ್

Pinterest LinkedIn Tumblr

moನಾಗ್ಪುರ್: ದಾದ್ರಿ ಹತ್ಯೆ ಘಟನೆ ದೇಶದಾದ್ಯಂತ ಆತಂಕದ ವಾತಾವರಣ ಸೃಷ್ಟಿಸಿರುವ ಮಧ್ಯೆ, ಇಂತಹ ಸಣ್ಣ ಘಟನೆಗಳಿಂದ ಹಿಂದು ಸಂಸ್ಕ್ರತಿಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ದೇಶದ ಜನತೆಯಲ್ಲಿ ಹೊಸ ಭರವಸೆ ಮೂಡಿಸಿ ವಿದೇಶಗಳಲ್ಲಿ ಭಾರತದ ಬಗ್ಗೆ ಹೆಮ್ಮೆ ಮೂಡಲು ಕಾರಣರಾದ ಪ್ರಧಾನಿ ಮೋದಿಯವರ ಕಾರ್ಯ ಶ್ಲಾಘನೀಯ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದಸರಾ ಹಬ್ಬದ ಅಂಗವಾಗಿ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ವಾರ್ಷಿಕ ಭಾಷಣ ಮಾಡಿದ ಭಾಗವತ್, ದುರ್ಬಲ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆಗಾಗಿ ಸಂವಿಧಾನದಲ್ಲಿ ಕಾನೂನು ರೂಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅಭಿನಂದನಾರ್ಹರು ಎಂದು ಹೇಳಿದರು.

ಪ್ರಸ್ತುತವಿರುವ ಮೀಸಲಾತಿಯನ್ನು ಪರಿಷ್ಕರಿಸಬೇಕು ಎಂದು ಇತ್ತೀಚೆಗೆ ಹೇಳಿಕೆ ನೀಡಿ ಬಿಹಾರ್ ಚುನಾವಣೆಯಲ್ಲಿ ಬಿಜೆಪಿಗೆ ಇಕ್ಕಟ್ಟಿನಲ್ಲಿ ಸಿಲುಕಿಸಿದ್ದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್, ತಮ್ಮ ನಿಲುವಿಗೆ ಯಾವತ್ತೂ ಬದ್ಧನಾಗಿದ್ದೇನೆ ಎಂದು ಸಮರ್ಥಿಸಿಕೊಂಡರು.

ದೇಶದಲ್ಲಿ ಸಣ್ಣ ಘಟನೆಗಳು ನಡೆಯುತ್ತವೆ. ಸಣ್ಣ ಘಟನೆಗಳನ್ನೇ ದೊಡ್ಡ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಸಣ್ಣ ಘಟನೆಗಳು ನಡೆಯುತ್ತಿರುತ್ತವೆ. ಆದರೆ, ಇದರಿಂದ ದೇಶದ ಸಂಸ್ಕ್ರತಿಗೆ ಧಕ್ಕೆಯಾಗುವುದಿಲ್ಲ. ಹಿಂದುತ್ವದಲ್ಲಿ ಏಕತೆಯಿದೆ ಎಂದರು.

ದಾದ್ರಿ ಹತ್ಯೆ ಸೇರಿದಂತೆ ಹಲವಾರು ಕೋಮುವಾದಿ ಘಟನೆಗಳ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೇರವಾಗಿ ಪ್ರಸ್ತಾಪಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

Write A Comment