ರಾಷ್ಟ್ರೀಯ

ಉಬರ್ ರೇಪ್ ಪ್ರಕರಣ: ಚಾಲಕ ಶಿವಕುಮಾರ್ ಯಾದವ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ದೆಹಲಿ ಕೋರ್ಟ್

Pinterest LinkedIn Tumblr

uber rapi

ನವದೆಹಲಿ: ಉಬರ್ ಕಂಪನಿ ಟ್ಯಾಕ್ಸಿ ಚಾಲಕ ಶಿವಕುಮಾರ್ ಯಾದವ್ 25 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದು, ಆರೋಪಿ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಇಂದು ಚಾಲಕ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 23ಕ್ಕೆ ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಅಪರಾಧಿಗೆ ಗರಿಷ್ಠ ಜೀವಾವಧಿ ಶಿಕ್ಷೆ ನೀಡುವ ಸಾಧ್ಯತೆ ಇದೆ.

2014 ಡಿಸೆಂಬರ್ 5ರಂದು ರಾತ್ರಿ ತನ್ನ ಟ್ಯಾಕ್ಸಿ ಏರಿದೆ ಗುರ್ಗಾಂವ್ ಹಣಕಾಸು ಸಂಸ್ಥೆಯ ಮಹಿಳಾ ಎಕ್ಸಿಕ್ಯುಟಿವ್ ಮೇಲೆ ಚಾಲಕ ಶಿವಕುಮಾರ್ ಅತ್ಯಾಚಾರ ಎಸಗಿದ್ದ. ಡಿಸೆಂಬರ್ 7ರಂದು ಮಥುರಾದಲ್ಲಿ ಆರೋಪಿ ಶಿವಕುಮಾರ್ ನನ್ನು ಬಂಧಿಸಲಾಗಿತ್ತು.

Write A Comment