ರಾಷ್ಟ್ರೀಯ

ಬೀಫ್ ಪಾರ್ಟಿ: ಕಾಶ್ಮೀರ ಪಕ್ಷೇತರ ಶಾಸಕನಿಗೆ ಮಸಿ ಬಳಿದ ಹಿಂದೂ ಸೇನೆ ಕಾರ್ಯಕರ್ತ

Pinterest LinkedIn Tumblr

rashidನವದೆಹಲಿ: ಗೋಮಾಂಸ ಔತಣಕೂಟವನ್ನು ಆಯೋಜಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ ಮುಖಕ್ಕೆ ಹಿಂದೂ ಸೇನೆ ಕಾರ್ಯಕರ್ತ ಮಸಿ ಬಳಿದಿರುವ ಘಟನೆ ನವದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ನಡೆದಿದೆ.

ಅಕ್ಟೋಬರ್‌ 8 ರಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಬೀಫ್ ಪಾರ್ಟಿ ಆಯೋಜನೆ ಮಾಡಿದ ರಶೀದ್ ಗೆ ಬಿಜೆಪಿ ಶಾಸಕರಿಂದ ವಿಧಾನಸಭೆಯಲ್ಲೇ ಹಲ್ಲೆ ಮಾಡಿದ್ದರು. ಇದೀಗ ನವದೆಹಲಿಯ ಪ್ರೆಸ್ ಕ್ಲಬ್ ನಲ್ಲಿ  ಮೂವರು ದುಷ್ಕರ್ಮಿಗಳು ಅವರ ಮುಖಕ್ಕೆ ಮಸಿ ಬಳಿದಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಹಿಂದೂ ಸೇನೆಯ ಮುಖಂಡ ಎಂದು ಹೇಳಿಕೊಂಡ ವಿಷ್ಣು ಗುಪ್ತಾ ಎಂಬುವವರು ಮಸಿ ಬಳಿದಿದ್ದಾರೆ.

ದಾಳಿ ಬಳಿಕ ಪ್ರತಿಕ್ರಿಯಿಸಿರುವ ರಶೀದ್ ಇದು ಭಾರತದ ತಾಲಿಬಾನಿಕರಣ ಎಂದು ಹೇಳಿದ್ದಾರೆ.

Write A Comment