ಅಂತರಾಷ್ಟ್ರೀಯ

ಆಫ್ರಿಕಾದೊಂದಿಗಿನ ಸಂಬಂಧ ಇನ್ನಷ್ಟು ಬಲಪಡಿಸಲು 42 ಮೋದಿ ಜಾಕೆಟ್‌ಗಳು!

Pinterest LinkedIn Tumblr

Australian Prime Minister Tony Abbott with Indian prime minister Narendra Modi upon his arrival  for his welcoming ceremony

ಹೊಸದಿಲ್ಲಿ,ಅ.19: ತನ್ನ ವೈಯಕ್ತಿಕ ಮುತ್ಸದ್ದಿತನದಿಂದ ಸಾಗರೋತ್ತರದಲ್ಲಿ ಹೆಸರು ಮಾಡಿರುವ ಪ್ರಧಾನಿ ನರೇಂದ್ರ ಮೊದಿಯವರು ಈ ತಿಂಗಳು ಆಫ್ರಿಕನ್ ರಾಷ್ಟ್ರಗಳ ನಾಯಕರಿಗಾಗಿ ಏರ್ಪಡಿಸಿರುವ ಭೋಜನ ಕೂಟದಲ್ಲಿ ಅದನ್ನು ಇನ್ನಷ್ಟು ಎತ್ತರಕ್ಕೊಯ್ಯುವ ಹೊಸ ವರಸೆಯಲ್ಲಿದ್ದಾರೆ.

ಈ ಕೂಟದಲ್ಲಿ ಭಾಗವಹಿಸಲಿರುವ ಎಲ್ಲ 42 ನಾಯಕರು ಪ್ರಧಾನಿಯವರ ಟ್ರೇಡ್ ಮಾರ್ಕ್ ಆಗಿರುವ ‘ಮೋದಿ ಜಾಕೆಟ್’ಗಳನ್ನು ಧರಿಸಲಿದ್ದಾರೆ. ಈಜಿಪ್ತ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಮತ್ತು ದ.ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜುಮಾ ಸೇರಿದಂತೆ ರಾಷ್ಟ್ರ ಮತ್ತು ಸರಕಾರಗಳ 42 ನಾಯಕರು 3ನೆ ಭಾರತ-ಆಫ್ರಿಕಾ ವೇದಿಕೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದು, ಮೋದಿ ಜಾಕೆಟ್‌ಗಳನ್ನು ಧರಿಸಿ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ತೋಳಿಲ್ಲದ ಈ ರಂಗುರಂಗಿನ ಜಾಕೆಟ್‌ಗಳನ್ನು ಸರಕಾರಿ ಸಂಸ್ಥೆಗಳುವಿಶೇಷವಾಗಿ ಸಿದ್ಧಗೊಳಿಸಿವೆ.ಭಾರತ ಭೇಟಿಯ ವೇಳೆ ಆಫ್ರಿಕನ್ ನಾಯಕರು ‘ಇಕ್ಕತ್ ಕುರ್ತಾ(ಪೈಜಾಮಾ ರಹಿತ)‘ಗಳನ್ನೂ ಧರಿಸಲಿದ್ದಾರೆ.

Write A Comment