ರಾಷ್ಟ್ರೀಯ

ವೈಷಮ್ಯ ಕಾರಣ 13 ವರ್ಷದ ಬಾಲಕನನ್ನು ಕುದುರೆಗೆ ಕಟ್ಟಿ ಎಳೆದು ಹತ್ಯೆ

Pinterest LinkedIn Tumblr

horse...ಕಾನ್ಪುರ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ 13 ವರ್ಷದ ಬಾಲಕನನ್ನು ಕುದುರೆಗೆ ಕಟ್ಟಿ ಎಳೆದು, ಸಾಯಿಸಿದ ಅಮಾನುಷ ಘಟನೆ ರಾಜ್ಪೂರ್ವದಲ್ಲಿ ನಡೆದಿದೆ.

ಅಕ್ಟೋಬರ್ 15ರಂದು ತಮ್ಮ ಮೋಹಿತ್(8) ಜತೆಗೂಡಿ ಮೃತ ಆಕಾಶ್ ಜಾನುವಾರಿಗೆ ಮೇವು ತರಲು ಸಮೀಪದ ಕಾಡಿಗೆ ತೆರಳಿದ್ದಾಗ ಇಬ್ಬರು ಈತನಿಗೆ ಥಳಿಸಿದ್ದಾರೆ. ಆಗ ಆಕಾಶ್ ಪ್ರತಿರೋಧ ತೋರಿದಾಗ ಆತನನ್ನು ಕುದುರೆಗೆ ಕಟ್ಟಿ ಕಾಡುಮೇಡಿನಲ್ಲಿ ಸುಮಾರು 20 ನಿಮಿಷಗಳ ಕಾಲ ಎಳೆದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಆಕಾಶ್ ನನ್ನು ಸ್ಥಳೀಯ ಆಸ್ಪತ್ರಗೆ ಸೇರಿಸಿದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈ ಸಂಬಂಧ ಬಾಲಕನ ಪೋಷಕರು ಇಂದು ಸ್ಥಳೀಯ ಠಾಣೆಗೆ ದೂರು ದಾಖಲಿಸಿದ್ದು, ಆಕಾಶ್ ತಂದೆ ರಾಜೇಶ್ ಹಳೆಯ ವೈಷಮ್ಯದ ಕಾರಣ ಸಮೀಪದ ನಿವಾಸಿಗಳಾದ ಮೇಘನಾಥ್ ಹಾಗೂ ಆತನ ಮಗ ಮದರಿ ನನ್ನ ಮಗನನ್ನು ಕುದುರೆಗೆ ಕಟ್ಟಿ ಎಳೆದು ಸಾಯಿಸಿದ್ದಾರೆ ಎಂದು ಹೇಳಿದ್ದಾರೆ.

ಪೋಷಕರ ದೂರಿನನ್ವಯ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Write A Comment