ಗಲ್ಫ್

ಡಿಸೆಂಬರ್ 18-19ರಂದು ದುಬೈಯಲ್ಲಿ ನಡೆಯಲಿದೆ UAE ಇತಿಹಾಸದಲ್ಲೇ ಅತಿದೊಡ್ಡ ದೇಹದಾರ್ಢ್ಯ ಸ್ಫರ್ಧೆ ‘ಮಿಸ್ಟರ್ ದುಬೈ ಇಂಡಿಯನ್-2015′; ಭಾರತೀಯ ವಲಸಿಗರಿಗಾಗಿ ಅವಕಾಶ

Pinterest LinkedIn Tumblr

PSX_20151017_172838

ದುಬೈ: ಯುಎಇಯ ಇತಿಹಾಸದಲ್ಲೇ ಅತಿ ದೊಡ್ಡ ದೇಹದಾರ್ಢ್ಯ ಚಾಂಪಿಯನ್ ಶಿಪ್ ಸ್ಫರ್ಧೆಯನ್ನು ಅಲ್ ಝೀಲ್ ಫಿಟ್ ನೆಸ್ ಮತ್ತು ದುಬೈ ಇಂಡಿಯನ್ ಕಮ್ಯುನಿಟಿ ಆಯೋಜಿಸಿದೆ. ಡಿಸೆಂಬರ್ 18 ಮತ್ತು 19ರಂದು ದುಬೈನ ಅಲ್ ನಾಸರ್ ಲೇಸರ್ ಲ್ಯಾಂಡ್ ನಲ್ಲಿ ‘ಮಿಸ್ಟರ್ ದುಬೈ ಇಂಡಿಯನ್ 2015′ ಪದವಿಗಾಗಿ ಈ ಸ್ಫರ್ಧೆ ನಡೆಯಲಿದೆ. ಈ ಸ್ಫರ್ಧೆ ಭಾರತೀಯ ವಲಸಿಗರಿಗಾಗಿ ಮಾತ್ರ ಮೀಸಲಾಗಿದೆ ಎಂದು ಸಂಸ್ಥೆಯು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಗಿದೆ.

IMG-20151016-WA0080

ಈ ಸ್ಫರ್ಧೆಯು ಎಮಿರೇಟ್ಸ್ ದೇಹ ದಾರ್ಢ್ಯ ಒಕ್ಕೂಟದ ಸಹಯೋಗದೊಂದಿಗೆ ನಡೆಯುತ್ತಿದೆ. ಅಲ್ಲದೆ ಭಾರತೀಯ ದೇಹದಾರ್ಢ್ಯ ಒಕ್ಕೂಟದ ಸಹಭಾಗಿತ್ವವಿರಲಿದೆ. ಸ್ಫರ್ಧೆಯು ಆರು ವಿಭಾಗಗಳಲ್ಲಿ ನಡೆಯಲಿದೆ. 60 ಕೆ.ಜಿ., 65 ಕೆ.ಜಿ., 70 ಕೆ.ಜಿ., 80 ಕೆ.ಜಿ., 80-90 ಕೆ.ಜಿ., 90-100 ಕೆ.ಜಿ, ಮತ್ತು 100 ಕೆ.ಜಿ. ಗಿಂತ ಅಧಿಕ ತೂಕದ ವಿಭಾಗಗಳಲ್ಲಿ ಸ್ಫರ್ಧೆ ನಡೆಯುತ್ತದೆ.

IMG-20151017-WA0075

ಪ್ರತಿಯೊಂದು ವಿಭಾಗದ ವಿಜೇತರು ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ. ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ, ತೃತೀಯ ಬಹುಮಾನಗಳಿರುತ್ತವೆ.

ಬಹುಮಾನಗಳ ವಿವರ ಹೀಗಿವೆ:

ಪ್ರಥಮ

“ಮಿಸ್ಟರ್ ದುಬೈ ಇಂಡಿಯನ್” ಪದವಿ+ರೂ. 10,00,000 ನಗದು+ಪ್ರಶಸ್ತಿ ಫಲಕ+ಪ್ರಶಸ್ತಿ ಪತ್ರ

ದ್ವಿತೀಯ

ರೂ. 5,00,000 ನಗದು+ಪ್ರಶಸ್ತಿ ಫಲಕ+ಪ್ರಶಸ್ತಿ ಪತ್ರ

ತೃತೀಯ

ರೂ.2,50,000 ನಗದು+ಪ್ರಶಸ್ತಿ ಫಲಕ+ಪ್ರಶಸ್ತಿ ಪತ್ರ

ಇತರ ಮೂವರು ಅಂತಿಮ ಸ್ಫರ್ಧಿಗಳು

ರೂ. 1,00,000 ನಗದು+ಪ್ರಶಸ್ತಿ ಪತ್ರ+ಪ್ರಶಸ್ತಿ ಫಲಕ

PSX_20151017_153523

ಇದು ಭಾರತೀಯ ದೇಹದಾರ್ಢ್ಯ ಪಟುಗಳಿಗೆ ತಮ್ಮ ಪ್ರದರ್ಶನ ನೀಡಿ, ಉತ್ತಮ ಬಹುಮಾನಗಳನ್ನು ಗೆದ್ದುಕೊಳ್ಳುವುದಕ್ಕೆ ಇರುವ ಒಂದು ಸುವರ್ಣವಕಾಶ ಎಂದು ಪ್ರಕಟನೆಯಲ್ಲಿ ಅಭಿಪ್ರಾಯ ಪಡಲಾಗಿದೆ. ಇದೇ ಸಂದರ್ಭ “ಯುಎಇ ಜಿಮ್ ಟ್ರಾಕರ್” (UAE gym tracker) ಎಂಬ ವೆಬ್ ಸೈಟ್ ಲೋಕಾರ್ಪಣೆಗೊಳ್ಳಲಿದೆ. ಈ ವೆಬ್ ಸೈಟ್ ನಲ್ಲಿ ಯುಎಇಯಲ್ಲಿರುವ ಬಹುತೇಕ ಜಿಮ್ ಕೇಂದ್ರಗಳ ವಿವರಗಳನ್ನು ಪ್ರಕಟಿಸಲಾಗುತ್ತದೆ. ಆ ಜಿಮ್ ಕೇಂದ್ರಗಳ ವಿಳಾಸ, ವಿವರ, ಫೋಟೊಗಳು ಮತ್ತು ಗ್ರಾಹಕರ ಫೀಡ್ ಬ್ಯಾಕ್ ಮುಂತಾದ ವಿಷಯಗಳನ್ನೊಳಗೊಳ್ಳಲಿವೆ.

PSX_20151017_180151

ಈ ಕುರಿತು ದುಬೈಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಮಿರೇಟ್ಸ್ ಬಾಡಿ ಬಿಲ್ಡಿಂಗ್ ಫೆಡರೇಶನ್ ನ ತಾಂತ್ರಿಕ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಕರೀಂ ಸಯೀದ್, ಮಿಸ್ಟರ್ ದುಬೈ ಇಂಡಿಯನ್ ಚಾಂಪಿಯನ್ ಶಿಪ್ ನ ರಾಯಭಾರಿ ಇಕ್ಬಾಲ್ ಅಬ್ದುಲ್ ಹಮೀದ್, ದುಬೈ ಇಂಡಿಯನ್ಸ್ ಪ್ರೋಗ್ರಾಮಿಂಗ್ ಕಮಿಟಿಯ ಅಧ್ಯಕ್ಷ ಹಾಗೂ ಅಲ್ ಝೀಲ್ ಫಿಟ್ ನೆಸ್ ನ ಮ್ಯಾನೇಜರ್ ಇಮ್ರಾನ್ ಖಾನ್, ದುಬೈ ಇಂಡಿಯನ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಯೂಸುಬ್ ಅನ್ಸಾರ್, ದುಬೈ ಇಂಡಿಯನ್ ಕಮಿಟಿಯಯ ಉಪಾಧ್ಯಕ್ಷ ಆದರ್ಶ್ ಆಚಾರ್ಯ, ನಾಗೇಂದ್ರ ಕಾಮತ್, ಅಬ್ದುಲ್ ಮುಖ್ತಾರ್, ಅಹ್ಮದ್ ಕೌಸರ್, ಚಿರಂಜೀತ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು. ಸ್ಫರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ಫರ್ಧೆಯ ಪ್ರಯೋಜನ ಪಡೆಯುವಂತೆ ಕಾರ್ಯಕ್ರಮ ಆಯೋಜಕರು ಮನವಿ ಮಾಡಿದ್ದಾರೆ.

Write A Comment