ರಾಷ್ಟ್ರೀಯ

7 ಮಂದಿಯನ್ನು ಕೊಂದು ಸತ್ತ ರೈತ

Pinterest LinkedIn Tumblr

suicide1

ವಲಸದ್: ಪ್ರಧಾನಿ ತವರು ರಾಜ್ಯ ಗುಜರಾತ್‌ನಲ್ಲಿ ರೈತನೋರ್ವ ಕುಟುಂಬದ 7 ಸದಸ್ಯರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ವಲಸದ್ ಜಿಲ್ಲೆಯ ನಾನಿ ಕೊಸಮ್ದಿ ಗ್ರಾಮದಲ್ಲಿ ನಡೆದ ಈ ಘಟನೆ ರೈತರ ದುಸ್ಥಿತಿ ಎತ್ತಿ ತೋರಿಸುತ್ತಿದೆ.

ಗ್ರಾಮದ 36 ವರ್ಷದ ಶ್ರವಣ್ ಕನಾರ್ ಎನ್ನುವಾತ ಪತ್ನಿ ಶಾಂತಾ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಒಂದು ವರ್ಷದ ಮೊಮ್ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಲಸದ್ ಪೊಲೀಸ್ ಕಂಟ್ರೋಲ್‌ ರೂಮ್‌ನ್ನು ಪ್ರಾಥಮಿಕ ವರದಿ ಪ್ರಕಾರ ಶ್ರವಣ್ ಓರ್ವ ಕೂಲಿ ಕಾರ್ಮಿಕ. ಈತ ಕುಡುಗೋಲಿನಿಂದ ಮನೆಯ 7 ಮಂದಿಯನ್ನು ಕೊಂದು, ಬಳಿಕ ತಾನು ಫ್ಯಾನ್‌ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಈ ಕೃತ್ಯಕ್ಕೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.

ಶ್ರವಣ್ ಕೈಯಲ್ಲಿ ದಾರುಣವಾಗಿ ಸತ್ತವರನ್ನು ಪತ್ನಿ ಶಾಂತ (35), ಯಮುನಾ (19), ಹೆಮ್ಕು (17), ಅಕ್ಷಯ್ (15), ಶೀಲಾ (14), ವಿರಾಲ್ (12) ಹಾಗೂ ಯಮುನಾಳ ಒಂದು ವರ್ಷದ ಮಗು ಪ್ರೀತಿ ಎಂದು ಗುರುತಿಸಲಾಗಿದೆ.

Write A Comment