ಲಿಮಾ(ಪೆರು): ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಸುಧಾರಣೆಗಳನ್ನು ವಿಳಂಬಗೊಳಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಆಡಳಿತಾತ್ಮಕ ಸುಧಾರಣೆಗಳು ಕೈಗೊಳ್ಳದಿರುವುದರಿಂದ ಐಎಂಎಫ್ ತನ್ನ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಐಎಂಎಫ್ನ ಅಂತಾರಾಷ್ಟ್ರೀಯ ಹಣಕಾಸು ಮತ್ತು ಆಯವ್ಯಯ ಸಮಿತಿ (ಐಎಂಎಫ್ಸಿ) ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಜೇಟ್ಲಿ, ಸಂಸ್ಥೆ ಅಭಿವೃದ್ಧಿಶೀಲ ದೇಶಗಳಿಗೆ ನೀಡುವ ಕೋಟಾ ಮತ್ತು ಆಡಳಿತ ಸುಧಾರಣೆಗಳನ್ನು ಕೈಗೊಳ್ಳದಿದ್ದಲ್ಲಿ ತನ್ನ ಗುರಿ ಮುಟ್ಟುವಲ್ಲಿ ಹಿಂದೆ ಬೀಳಲಿದೆ ಎಂದಿದ್ದಾರೆ.