ರಾಷ್ಟ್ರೀಯ

ರಕ್ತ ಸೋರುತ್ತಿದ್ದ ರುಂಡದೊಂದಿಗೆ ಬೀದಿಯಲ್ಲಿ ಓಡಾಟ!

Pinterest LinkedIn Tumblr

rundaಪುಣೆ: ವೃದ್ಧ ವ್ಯಕ್ತಿಯೊಬ್ಬ ರಕ್ತ ಸೋರುತ್ತಿದ್ದ ರುಂಡವನ್ನು ಹಿಡಿದುಕೊಂಡು ನಡುಬೀದಿಯಲ್ಲಿ ಓಡಾಡುತ್ತಿದ್ದ ದೃಶ್ಯವನ್ನು ನೋಡಿ ಪುಣೆ ವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಶುಕ್ರವಾರ ಮುಂಜಾನೆ ಸಂದರ್ಭದಲ್ಲಿ ಈ ಬೀಭತ್ಸ ಘಟನೆ ನಡೆದಿದೆ.

ರುಂಡವನ್ನು ಹಿಡಿದುಕೊಂಡು ಓಡಾಡುತ್ತ ಜನರಲ್ಲಿ ಭಯವನ್ನು ಹುಟ್ಟಿಸಿದಾತನನ್ನು ರಾಮಚಂದ್ರ ಚವನ್ (60) ಎಂದು ಗುರುತಿಸಲಾಗಿದ್ದು, ಟ್ರಾಫಿಕ್ ಪೊಲೀಸ್ ಆತನನ್ನು ತಡೆದು ಬಂಧಿಸುವವರೆಗೂ ಆತ ಬೀದಿಯಲ್ಲಿ ಓಡಾಡಿಕೊಂಡೇ ಇದ್ದ ಎಂದು ತಿಳಿದು ಬಂದಿದೆ.

ಧೋತಿ ಮತ್ತು ಕುರ್ತಾವನ್ನು ಧರಿಸಿದ್ದ ಆತ ಒಂದು ಕೈಯ್ಯಲ್ಲಿ ಮಹಿಳೆಯೊಬ್ಬಳ ತಲೆಯನ್ನು ಮತ್ತೊಂದು ಕೈಯ್ಯಲ್ಲಿ ಕೊಡಲಿಯನ್ನು ಹಿಡಿದಿದ್ದ. ಆ ಭೀಕರ ದೃಶ್ಯವನ್ನು ನೋಡಿದ ಪೊಲೀಸರು ಆತನ ಹಿಂದೆ ಓಡಿ ಕಡಿದ ತಲೆಗೆ ಬಟ್ಟೆಯಿಂದ ಮುಚ್ಚಿಬಿಟ್ಟಿದ್ದಾರೆ.

ವಾಚ್‍ಮ್ಯಾನ್ ಆಗಿ ಕೆಲಸಮಾಡುತ್ತಿರುವ 65 ವರ್ಷದ ಚವನ್  ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ಪತ್ನಿ ಸೋನಾಭಾಯಿ(55)ಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment