ಮನೋರಂಜನೆ

ನೈಟ್ ಕ್ಲಬ್ ಗೆ ಹೋಗಿದ್ದ ಸಲ್ಮಾನ್ ಖಾನ್ ನನ್ನು ದೋಚಿದ ಯುವತಿಯರು !

Pinterest LinkedIn Tumblr

salman1

ರೀಲ್ ಜೀವನದಲ್ಲಿ ಸಲ್ಮಾನ್ ಖಾನ್ ಅವರು ಸಾವಿರಾರು ಜನರನ್ನು ರಕ್ಷಿಸುವ ದೃಶ್ಯಗಳು ಸರ್ವೇಸಾಮಾನ್ಯ ಆದರೆ ಅವರದ್ದೇ ವಸ್ತುಗಳು ಕಳವಾಗುವುದರಿಂದ ರಕ್ಷಿಸಿಕೊಳ್ಳಲು ವಿಫಲರಾಗಿದ್ದಾರೆ.

ಮೂಲಗಳ ಪ್ರಕಾರ ಮುಂಬೈನ ನೈಟ್ ಕ್ಲಬ್ ಒಂದರಲ್ಲಿ ಈ ಘಟನೆ ನಡೆದಿದೆ. ಅಭಿಮಾನಿಗಳು ಎಂದು ಹೇಳಿಕೊಂಡು ಆ ನಟನ ಬಳಿ ಬಂದ ನಾಲ್ವರು ಯುವತಿಯರು ಸಲ್ಮಾನ್ ಅವರು ಮೇಜಿನ ಮೇಲೆ ಇಟ್ಟಿದ್ದ ವ್ಯಾಲೆಟ್, ಸನ್ ಗ್ಲಾಸ್ ಮತ್ತು ಭಜರಂಗಿ ಭಾಯಿಜಾನ್ ತಾಯತವನ್ನು ಕದ್ದೊಯ್ದಿದ್ದಾರೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಭದ್ರತಾ ಸಿಬ್ಬಂದಿ ನಟನಿಗೆ ದೂರು ನೀಡುವಂತೆ ಸಲಹೆ ನೀಡಿದ್ದರೂ, ಇದಕ್ಕೆ ನಿರಾಕರಿಸಿದ ಸಲ್ಮಾನ್ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಟ ಇತ್ತೀಚಿನ ದಿನಗಳಲ್ಲಿ ಯಾವುದೇ ನೈಟ್ ಕ್ಲಬ್ ಗೆ ಹೋಗಿಲ್ಲ ಎಂದು ಅರ್ಪಿತಾ ಖಾನ್ ಶರ್ಮಾ ಅವರು ಸುದ್ದಿಯನ್ನು ನಿರಾಕರಿಸಿದ್ದರು, ನಿರ್ಮಾಪಕಿ ನಂದಿತಾ ಸಿಂಗ ಈ ಸುದ್ದಿಯನ್ನು ಧೃಢೀಕರಿಸಿದ್ದು, ಈ ಘಟನೆಯ ನಂತರ ತಮ್ಮ ಭದ್ರತಾ ಸಿಬ್ಬಂದಿಯನ್ನು ಇಬ್ಬರಿಂದ ೧೪ ಜನರಿಗೆ ವೃದ್ಧಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Write A Comment