ರಾಷ್ಟ್ರೀಯ

ಗೋಮಾಂಸ ನಿಷೇಧದ ವಿರುದ್ಧ ಕೇರಳ ಶಿಕ್ಷಕಿ ನಿಲುವು: ಹಿಂದುತ್ವ ಸಂಘಟನೆ ಬೆದರಿಕೆ

Pinterest LinkedIn Tumblr

meatಕೊಚ್ಚಿ: ಶ್ರೀಕೇರಳ ವರ್ಮಾ ಕಾಲೇಜಿನ ಮಲೆಯಾಳಂ ಶಾಖೆಯ ಸಹಾಯಕ ಪ್ರಾಧ್ಯಾಪಕ ದೀಪಾ ನಿಶಾಂತ್ ಈಗ ಎಬಿವಿಪಿ ವಿದ್ಯಾರ್ಥಿಗಳು ಮತ್ತು ಎಡಪಂಥೀಯ ಗುಂಪುಗಳ ಕೋಪಕ್ಕೆ ಗುರಿಯಾಗಿದ್ದಾರೆ. ಲೇಖಕಿ ಕೂಡ ಆಗಿರುವ ದೀಪಾ ಕಾಲೇಜಿನಲ್ಲಿ ಎಸ್‌ಎಫ್‌ಐ ವಿದ್ಯಾರ್ಥಿಗಳು ಆಯೋಜಿಸಿದ್ದ ಗೋ ಮಾಂಸ ಉತ್ಸವದ ಮೂಲಕ ಪ್ರತಿಭಟನೆಗೆ ಬೆಂಬಲಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ್ದರು.  ಕಾಲೇಜ್ ಕ್ಯಾಂಪಿಸ್ಸಿನೊಳಗೆ ಗೋಮಾಂಸ ನಿಷೇಧದ ವಿರುದ್ಧ ಕೂಡ ಅವರು ಧ್ವನಿ ಎತ್ತಿದ್ದರು.  ಕಾಲೇಜುಗಳಲ್ಲಿ ಗೋಮಾಂಸ ನಿಷೇಧಿಸುವ ಮೂಲಕ ಮಂದಿರಗಳನ್ನು ದೇವಾಲಗಳಿಗೆ ಇಂದು ಹೋಲಿಕೆ ಮಾಡಿದ್ದಾರೆ.

ನಾಳೆ ಅನೇಕ ಕಾರಣವನ್ನೊಡ್ಡಿ ಋುತುಮತಿಯಾದ ಮಹಿಳೆಯರು ಮತ್ತು ಹಿಂದುಳಿದ ವರ್ಗದವರು ದೇವಾಲಯ ಪ್ರವೇಶಿಸುವುದಕ್ಕೆ ನಿಷೇಧಿಸುತ್ತಾರೆ ಎಂದು ಬರೆದಿದ್ದರು. ಆದಾಗ್ಯೂ ಅವರು ಈ ಪೋಸ್ಟ್ ಹಿಂದಕ್ಕೆ ಪಡೆದಿದ್ದರು. ಬಿಜೆಪಿ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಕಾರ್ಯಕರ್ತರು ಕೊಚ್ಚಿನ್ ದೇವಸ್ವಂ ಮಂಡಳಿಗೆ ಈ ಕುರಿತು ದೂರು ನೀಡಿದ್ದಾರೆ.

ಮಂಡಳಿಯು ತನಿಖೆಗೆ ಆದೇಶಿಸಿದ್ದು, ವರದಿ ಸಲ್ಲಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದೆ. ಅವರ ನಿಲುವಿಗೆ ಬೆಂಬಲಿಸಿದ ಜನರು ಅವರ ಫೇಸ್‌ಬುಕ್ ವಾಲ್‌ನಲ್ಲಿ ಪೋಸ್ಟ್ ಮಾಡಿದ್ದರೂ, ಅವರ ಇನ್‌ಬಾಕ್ಸ್‌ನಲ್ಲಿ ಬಲಪಂಥೀಯ ಕಾರ್ಯಕರ್ತರು ನಿಂದನಾತ್ಮಕ ಸಂದೇಶಗಳನ್ನು ಮತ್ತು ಬೆದರಿಕೆಗಳನ್ನು ಕಳಿಸುತ್ತಿದ್ದಾರೆ.

ದಾದಜ್ರಿಯಲ್ಲಿ ಮೊಹಮದ್ ಅಕ್ಲಾಖ್ ಎಂಬವರು ಗೋಮಾಂಸ ಸೇವಿಸಿದ ವದಂತಿಗಳ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದನ್ನು ಪ್ರತಿಭಟಿಸಿ, ಸಿಪಿಐ(ಎಂ) ವಿದ್ಯಾರ್ಥಿ ದಳವು ಶ್ರೀಕೇರಳ ವರ್ಮಾ ಕಾಲೇಜಿನಲ್ಲಿ ಗೋ ಉತ್ಸವವನ್ನು ಆಯೋಜಿಸಿತ್ತು. ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಸರ್ಕಾರ ಅನುದಾನಿತ ಕಾಲೇಜು ಕಠಿಣ ಕ್ರಮ ಕೈಗೊಂಡು 6 ಮಂದಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದಾರೆ.

Write A Comment