ರಾಷ್ಟ್ರೀಯ

14 ವರ್ಷದ ಹಿಂದೆ 400 ರು.ದರೋಡೆ: ಇದೀಗ ಇಬ್ಬರು ಆರೋಪಿಗಳಿಗೆ 4 ವರ್ಷ ಜೈಲು, 10,000 ಸಾವಿರ ರು.ದಂಡ !

Pinterest LinkedIn Tumblr

jail

ನವದೆಹಲಿ: 14 ವರ್ಷದ ಹಿಂದೆ ಆಟೋ ಚಾಲಕನಿಂದ 400ರು. ದೋಚಿದ್ದ ಇಬ್ಬರು ವ್ಯಕ್ತಿಗಳಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿ, ತಲಾ 10 ಸಾವಿರ ರು. ದಂಡವಿಧಿಸುವಂತೆ ಸೂಚಿಸಿದೆ.

ತೀರ ಅಪರೂಪದ ಪ್ರಕರಣಗಳಲ್ಲಿ ಒಂದಾದ ಈ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ನಿವಾಸಿಗಳಾದ ಸುಮಿತ್(33 ವರ್ಷ) ಹಾಗೂ ಹೇಮ್ ರಾಜ್(37ವರ್ಷ) ಐಪಿಸಿ ಸೆಕ್ಷನ್ 392(34)ರ ಪ್ರಕಾರ ದೋಷಿ ಎಂದು ದಿಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಹೆಮಾನಿ ಮಲೋತ್ರಾ ತೀರ್ಪು ನೀಡಿದ್ದರು. ಇಬ್ಬರೂ ಆರೋಪಿಗಳು ತಲಾ 10 ಸಾವಿರ ರೂಪಾಯಿಯಂತೆ ಆಟೋ ಚಾಲಕ ವಿಜಯ್ ಗೆ ಪಾವತಿಸುವಂತೆ ಸೂಚನೆ ನೀಡಿದೆ.

2001 ಸೆಪ್ಟೆಂಬರ್ 11ರ ರಾತ್ರಿ ಉತ್ತರ ದೆಹಲಿಯ ಬುರಾರಿಯತ್ತ ತೆರಳುತ್ತಿದ್ದ ಆಟೋವನ್ನು ಅಡ್ಡಗಟ್ಟಿದ್ದ ಸುಮತ್ ಮತ್ತು ಹೇಮರಾಜ್ ಆಟೋ ಚಾಲಕನಿಂದ 400 ರು. ದೋಚಿ ಪರಾರಿಯಾಗಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 2 ದಿನಗಳ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಇಬ್ಬರೂ ಆರೋಪಿಗಳು ತಮ್ಮದೇನೂ ತಪ್ಪಿಲ್ಲ. ಪ್ರಕರಣದಲ್ಲಿ ತಮ್ಮನ್ನು ಸುಖಾಸುಮ್ಮನೆ ಸಿಕ್ಕಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 10 ವರ್ಷಗಳ ಬಳಿಕ ದೌರ್ಜನ್ಯಕ್ಕೊಳಗಾದ ಆಟೋಚಾಲಕ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ 4 ವರ್ಷ ಜೈಲು ಮತ್ತು ತಲಾ 10 ಸಾವಿರ ರು. ದಂಡ ವಿಧಿಸಿದ್ದಾರೆ.

Write A Comment