ರಾಷ್ಟ್ರೀಯ

ಭಾರತ ವಿಶ್ವದ 5ನೇ ಮಾರಣಾಂತಿಕ ಸೇನೆ!

Pinterest LinkedIn Tumblr

military-finalನವದೆಹಲಿ: ಪಾಕಿಸ್ತಾನಕ್ಕೆ ಇದೊಂದು ಎಚ್ಚರಿಕೆ ಕರೆಗಂಟೆಯಾಗಿದ್ದು, ಇತ್ತೀಚೆಗಿನ ರಕ್ಷಣಾ ವರದಿಗಳ ಪ್ರಕಾರ ವಿಶ್ವದ ಮಾರಾಣಾಂತಿಕ ಸೇನೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ  5ನೇ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗೆ ಬಿಡುಗಡೆಯಾದ ಡಿಫೆನ್ಸ್ ನ್ಯೂಸ್.ಇನ್ (defencenews.in)ವರದಿಗಳ ಪ್ರಕಾರ ಭಾರತದ ಬಳಿ ವಿಶ್ವದಲ್ಲೇ ಉತ್ಕೃಷ್ಟವಾದ ಮತ್ತು ಬಲಾಢ್ಯ ಸೇನಾಪಡೆಯಿದ್ದು, ಇಂತಹ ಬಲಿಷ್ಠ  ಸೇನಾಪಡೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ ಲಭಿಸಿದೆ. ಮೊದಲ ಸ್ಥಾನದಲ್ಲಿ ದೊಡ್ಣಣ್ಣ ಅಮೆರಿಕ ಮುಂದುವರೆದಿದ್ದು, ಎರಡು ಮತ್ತು ಮೂರನೇ ಸ್ಥಾನದಲ್ಲಿ ರಷ್ಯಾ ಮತ್ತು ಚೀನಾ ದೇಶಗಳಿವೆ.

ಜಾಗತೀಕರಣದ ಪ್ರವೃತ್ತಿ ಕುರಿತು ಕ್ರೆಡಿಟ್ ಸ್ವಿಸ್ ಸಂಸ್ಥೆ ತಯಾರಿಸಿದ್ದ ವರದಿಯಲ್ಲಿ ಭಾರತ 0.69 ಅಂಕಗಳನ್ನು ಗಳಿಸಿದೆ. ಈ ಪಟ್ಟಿಯಲ್ಲಿ ಅಮೆರಿಕ ಸೇನೆ 0.94 ಅಂಕಗಳಿಸಿದ್ದರೆ, ರಷ್ಯಾ 0.80  ಮತ್ತು ಚೀನಾ 0.79 ಅಂಕಗಳನ್ನು ಗಳಿಸಿವೆ. ಉಳಿದಂತೆ ಜಪಾನ್ 0.72 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, 0.61 ಅಂಕಗಳಿಸಿರುವ ಫ್ರಾನ್ಸ್ 6ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ದಕ್ಷಿಣ  ಕೊರಿಯಾಗೆ 7 ಸ್ಥಾನ ಲಭಿಸಿದ್ದು, ಇದು 0.52 ಅಂಕಗಳನ್ನು ಗಳಿಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪಾಕಿಸ್ಥಾನ ಪಟ್ಟಿಯಲ್ಲಿ 11ನೇ ಸ್ಥಾನ ದೊರೆತಿದ್ದು, ಪಾಕಿಸ್ತಾನದ ಗಳಿಕೆ 0.41 ಆಗಿದೆ. ತನ್ನ ಎದುರಾಳಿಗಳ ವಿರುದ್ಧದ ಅಮೆರಿಕದ ಸಾಂಪ್ರದಾಯಿಕ ಯುದ್ಧ ಸಾಮರ್ಥ್ಯವು  ಪರಮೋಚ್ಚ ಪಾರಮ್ಯವನ್ನು ಹೊಂದಿದೆ ಎಂದು ವರದಿ ಹೇಳಿದ್ದು, ಅಮೆರಿಕದ ಬಳಿ 13,900 ಯುದ್ಧ ವಿಮಾನಗಳು, 920 ದಾಳಿ ಹೆಲಿಕಾಪ್ಟರ್‌ಗಳು, 20 ಅಣ್ವಸ್ತ್ರ ವಾಹಕ ಸಮರ ವಿಮಾನಗಳು,  72 ಜಲಾಂತರ್ಗಾಮಿಗಳು ಇವೆ. 2014ರಲ್ಲಿ ಅಮೆರಿಕ 610 ಬಿಲಿಯನ್ ಡಾಲರ್‌ಗಳನ್ನು ಮಿಲಿಟರಿಗಾಗಿ ವ್ಯಯಿಸಿದೆ.

ಹಾಗಿದ್ದರೂ ಇಂದಿನ ಅಣ್ವಸ್ತ್ರ ಪ್ರಾಬಲ್ಯದ ದಿನಗಳಲ್ಲಿ ಸಾಂಪ್ರದಾಯಿಕ ಸಮರ ಸಾಮರ್ಥ್ಯವನ್ನು ಮಾತ್ರವೇ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ವಿಶ್ವದ ಒಟ್ಟು ಅಣ್ವಸ್ತ್ರಗಳ ಪೈಕಿ ಶೇ.90ರಷ್ಟು  ಅಣ್ವಸ್ತ್ರಗಳು ಅಮೆರಿಕ ಮತ್ತು ರಷ್ಯಾದ ಬಳಿಯೇ ಇವೆ ಎಂದು ವರದಿ ಹೇಳಿದೆ.

ಭಾರತದ ಸಾಂಪ್ರದಾಯಿಕ ಸಮರ ಸಾಮರ್ಥ್ಯ ಪಾಕಿಸ್ಥಾನಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚಿದೆ. ಆದರೂ ಇತ್ತೀಚೆಗಷ್ಟೇ ಪಾಕ್‌ ಸೇನಾ ಪಡೆ ಮುಖ್ಯಸ್ಥ ರಹೀಲ್‌ ಶರೀಫ್ ಅವರು “ಭಾರತ ಯಾವುದೇ  ಬಗೆಯ ದುಸ್ಸಾಹಸಕ್ಕೆ ಮುಂದಾದಲ್ಲಿ ಅಂತಹ ಯಾವುದೇ ಬಗೆಯ ಬೆದರಿಕೆಯನ್ನು ಎದುರಿಸಲು ಪಾಕಿಸ್ಥಾನ ಸಂಪೂರ್ಣವಾಗಿ ಸಮರ್ಥವಿದೆ ಮತ್ತು ಅಂತಹ ಪ್ರಸಂಗವು ಭಾರತಕ್ಕೆ ಎಂದೂ  ಭರಿಸಲಾಗದ ವೆಚ್ಚಕ್ಕೆ ಕಾರಣವಾಗಲಿದೆ’ ಎಂದು ಹೇಳುವ ಮೂಲಕ ಪಾಕಿಸ್ಥಾನದ ಬಳಿ ಇರುವ ಅಣ್ವಸ್ತ್ರ ಸಾಮರ್ಥ್ಯವನ್ನು ನೇರವಾಗಿ ತೆರೆದಿಟ್ಟಿದ್ದಾರೆ.

Write A Comment