ರಾಷ್ಟ್ರೀಯ

ಪ್ರೇಮಿಯನ್ನು ಮದುವೆಯಾಗಲು ಯಾರದ್ದೋ ಮಗು ಕದ್ದಳು!

Pinterest LinkedIn Tumblr

kidnapತಿಕಾಮ್ಘರ್: ತನ್ನ ಪ್ರೇಮಿಯನ್ನು ಮದುವೆಯಾಗಲು ವಿವಾಹಿತ ಮಹಿಳೆಯೊಬ್ಬಳು ನೆರೆಮನೆಯವರ ಮಗುವನ್ನು ಕದ್ದ ವಿಲಕ್ಷಣ ಘಟನೆ  ಮಧ್ಯ ಪ್ರದೇಶದಲ್ಲಿ ನಡೆದಿದೆ. ಪ್ರೇಮಿಯನ್ನು ಮದುವೆಯಾಗುವುದಕ್ಕೂ ಮಗುವಿಗೂ ಏನು ಸಂಬಂಧ ಅನ್ನುತ್ತೀರಾ? ಹಾಗಾದರೆ ಮುಂದೆ ಓದಿ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಬಂದ ವರದಿಯ ಪ್ರಕಾರ ಸರೋಜ್ ಎಂಬ ವಿವಾಹಿತ ಮಹಿಳೆ ಕಳೆದ ಎರಡು ವರ್ಷಗಳ ಹಿಂದೆ ತನ್ನ ಪತಿಯೊಂದಿಗೆ ಕೂಲಿ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಳು. ಆಗ ಅಲ್ಲಿ ರಾಕೇಶ್ ಎಂಬಾತನ ಜತೆ ಆಕೆ ಅನೈತಿಕ ಸಂಬಂಧವನ್ನು ಬೆಳೆಸಿದ್ದಳು. ದೆಹಲಿಯಿಂದ ಹಿಂತಿರುಗಿದ ಬಳಿಕ ಸಹ ಆಕೆ ಆತನಿಗೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು.

ಕಳೆದ ಕೆಲ ದಿನಗಳ ಹಿಂದೆ ನಿನ್ನಿಂದ ನನಗೆ ಮಗುವು ಸಹ ಆಗಿದೆ ಎಂದು ಹೇಳಿ ಪ್ರಿಯಕರನಿಗೆ ಯಾಮಾರಿಸಿದ್ದ ಆಕೆ, ಭೇಟಿಯಾಗಲು ಮಗುವಿನ ಜತೆಗೆ ಬರುವುದಾಗಿ ಹೇಳಿದ್ದಳು. ಅದರಂತೆ ನೆರೆಮನೆಯ 9 ತಿಂಗಳ ಮಗುವನ್ನು ಅಪಹರಿಸಿದ ಆಕೆ ಪ್ರಿಯಕರನನ್ನು ಭೇಟಿಯಾಗಲು ಜೈಸಿನಗರಕ್ಕೆ ಹೋಗಿದ್ದಾಳೆ. ಆಕೆಯನ್ನು ನಂಬಿದ ರಾಕೇಶ್ ಅವರಿಬ್ಬರನ್ನು ಕರೆದುಕೊಂಡು ಭೋಪಾಲಕ್ಕೆ ಪ್ರಯಾಣ ಬೆಳೆಸಿದ್ದಾನೆ.

ಆದರೆ ಮಗು ಅಪಹರಣಗೊಂಡ ದೂರು ಪಡೆದ ಪೊಲೀಸರ ಕಾರ್ಯಾಚರಣೆಗಿಳಿದು ಮಗುವನ್ನು ಕದ್ದೊಯ್ದಿದ್ದ ಸರೋಜ್, ಜತೆಗೆ ರಾಕೇಶ್‌ನನ್ನು ಬಂಧಿಸಿದ್ದು ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಆದರೆ ತಾಯಿಯಿಂದ ಬೇರ್ಪಟ್ಟ ಮಗು ಅಸ್ವಸ್ಥವಾದಾಗ ರಾಕೇಶನ ಅಕ್ಕ ಕಬ್ಬಿಣದ ರಾಡ್‌ನಿಂದ ಬರೆ ಇಟ್ಟಿದ್ದ ಪರಿಣಾಮ ಮಗುವಿನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಬರೆ ನೀಡಿದ ರಾಕೇಶನ ಸಹೋದರಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

Write A Comment