ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ರಾಮ್ ಜೇಠ್ಮಲಾನಿ, ಮೋದಿಗೆ ಶಿಕ್ಷೆಯಾಗಬೇಕಿದೆ ಎಂದು ಹೇಳಿದ್ದಾರೆ.
ಎಎನ್ಐ ನೊಂದಿಗೆ ಮಾತನಾಡಿರುವ ಯಾರಿಗಾದರೂ ಮಾತನಾ ನೀಡಬೇಕಾದರೆ ಅದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಗೆ ಮತಚಲಾಯಿಸುವುದಾಗಿ ಜೇಠ್ಮಲಾನಿ ತಿಳಿಸಿದ್ದಾರೆ. ಮೋದಿ ಸೋಲನ್ನು ಎದುರಿಸಬೇಕಿದ್ದು ನಾನು ನಿತೀಶ್ ಕುಮಾರ್ ಸರ್ಕಾರವನ್ನು ಬೆಂಬಲಿಸುತ್ತೇನೆ.
ಕಪ್ಪು ಹಣ ವಿಚಾರ ಸೇರಿದಂತೆ ಅನೇಕ ವಿಷಯಗಳಲ್ಲಿ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ರಾಮ್ ಜೇಠ್ಮಲಾನಿ, ಮೋದಿ ಬಗ್ಗೆ ಇರುವ ಗೌರವ ಕಡಿಮೆಯಾಗುತ್ತಿದೆ ಎಂದು ಈ ಹಿಂದೆಯೇ ಹೇಳಿದ್ದರು. ಸಿಬಿಡಿಟಿ ಅಧ್ಯಕ್ಷ ಕೆವಿ ಚೌಧರಿ ಅವರನ್ನು ಚೀಫ್ ವಿಜಿಲೆನ್ಸ್ ಕಮಿಷನರ್ ಆಗಿ ನೇಮಕ ಮಾಡಿದ್ದನ್ನು ಸಹ ರಾಮ್ ಜೇಠ್ಮಲಾನಿ ವಿರೋಧಿಸಿದ್ದರು. ಚೌಧರಿ ನೇಮಕಕ್ಕೆ ರಾಷ್ಟ್ರಪತಿಗಳು ಸಹಿ ಹಾಕಿದ್ದು, ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೋರಾಡುವುದಾಗಿ ರಾಮ್ ಜೇಠ್ಮಲಾನಿ ತಿಳಿಸಿದ್ದಾರೆ.