ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚತುರ ರಾಜಕಾರಣಿ, ಮೋದಿ ಅವರನ್ನು ಅಮೆರಿಕ ತಾರೆಯಂತೆ ಸ್ವಾಗತಿಸಿತು ಎಂದು ಪಾಕಿಸ್ತಾನ ಪತ್ರಿಕೆಯೊಂದು ಬರೆದ ಬೆನ್ನಲ್ಲೇ ಪಾಕ್ ಪತ್ರಕರ್ತರೊಬ್ಬರು ಮೋದಿ ಅವರನ್ನು ಐಟಂ ಗರ್ಲ್ ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.
ಮೋದಿ ಅಮೇರಿಕಾ ಪ್ರವಾಸದ ಬಗ್ಗೆ ಬ್ಲಾಗ್ ಬರೆದಿರುವ ಪಾಕ್ ಪತ್ರಕರ್ತ ಡಾ.ಶಾಹಿದ್ ಮಸೂದ್, ಮೋದಿ ಅಮೇರಿಕ ಪ್ರವಾಸ ಮಾಧ್ಯಮಗಳು ಬಿಂಬಿಸಿರುವಷ್ಟು ವೈಭವವಾಗಿಲ್ಲ ಎಂದು ಹೇಳಿದ್ದು ಮೋದಿ ಅವರನ್ನು ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.
ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಸಂಪಾದಕೀಯ ಬರೆದಿದ್ದ ಪಾಕಿಸ್ತಾನ ಪತ್ರಿಕೆ, ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕೀಯ ಹಾಗೂ ಸೇನೆಯ ಪ್ರಾಬಲ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು ಅವರೊಬ್ಬ ಚತುರ ರಾಜಕಾರಣಿ ಎಂದು ಹೇಳಿತ್ತು. ಅಲ್ಲದೇ ಅಮೆರಿಕಾ ನರೇಂದ್ರ ಮೋದಿ ಅವರನ್ನು ತಾರೆಯಂತೆ ಸ್ವಾಗತಿಸಿತು ಎಂದು ಬರೆದಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕ್ ಪತ್ರಕರ್ತ ಡಾ.ಶಾಹಿದ್ ಮಸೂದ್ ಜನಪ್ರೀಯತೆ ವಿಷಯದಲ್ಲಿ ಮೋದಿ ಅವರನ್ನು ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.
