ನವದೆಹಲಿ: ತನ್ನ ಪತ್ನಿಗೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಮಾಜೀ ಸಚಿವ ಸೋಮನಾಥ ಭಾರ್ತಿ ಅವರು ಸೋಮವಾರ ರಾತ್ರಿ ದೆಹಲಿ ಪೊಲೀಸರಿಗೆ ಶರಣಾಗಿದ್ದಾರೆ. ದೆಹಲಿಯ ದ್ವಾರಕಾ ಪೊಲೀಸ್ ಠಾಣೆಗೆ ಬಂದು ಸೋಮನಾಥ್ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದಲ್ಲಿ ಸಚಿವರಾಗಿದ್ದ ಸೋಮನಾಥ್ ಭಾರ್ತಿ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಕೇಳಿ ಬಂದ ಬಳಿಕ ಅವರು ಸಚಿವ ಸ್ಥಾನವನ್ನು ತ್ಯಜಿಸಿದ್ದರು. ಭಾರ್ತಿ ವಿರುದ್ಧ ಅವರ ಪತ್ನಿ ಲಿಪಿಕಾ ಮಿತ್ರಾ ಅವರು ಪೊಲೀಸ್ ದೂರು ದಾಖಸಿಲಿದ್ದರು. ಭಾರ್ತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಉಚ್ಛ ನ್ಯಾಯಾಲಯವು ಕಳೆದ ವಾರ ತಿರಸ್ಕರಿಸಿತ್ತು. ಅಂದಿನಿಂದ ಬಂಧನ ಭೀತಿ ಎದುರಿಸುತ್ತಿದ್ದ ಭಾರ್ತಿ ಅವರು ಪೊಲೀಸರ ಕೈಗೆ ಸಿಗದೆ ತಲೆ ತಪ್ಪಿಸಿಕೊಂಡಿದ್ದರು.
ಅಲ್ಲಿಂದ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಸೋಮನಾಥ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿ ಶರಣಾಗುವಂತೆ ಸೂಚಿಸಿತ್ತು.
-ಉದಯವಾಣಿ