ಅಂತರಾಷ್ಟ್ರೀಯ

ಡಿಜಿಟಲ್ ಇಂಡಿಯಾಕ್ಕೆ ಅಮೆರಿಕಾದ ಗಣ್ಯ ಸಿಇಒಗಳ ಸಾಥ್

Pinterest LinkedIn Tumblr

mo1

ಸಿಲಿಕಾನ್ ವ್ಯಾಲಿ, ಸೆ.27: ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಪ್ರಮುಖ ರೂವಾರಿಗಳಾದ ಅಮೆರಿಕಾದ ಗಣ್ಯ ಸಿಇಓಗಳು ಭಾರತದ `ಡಿಜಿಟಲ್ ಇಂಡಿಯಾ’ ಯೋಜನೆಗೆ ಸಾಥ್ ನೀಡುವ ಭರವಸೆ ನೀಡಿದ್ದು, ಭಾರತಕ್ಕೆ ಅಗತ್ಯವಾದ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಮ್ಮತಿ ಸೂಚಿಸಿದ್ದಾರೆ.

ಸಿಲಿಕಾನ್ ವ್ಯಾಲಿಯಲ್ಲಿ ಐಟಿ ಕ್ಷೇತ್ರದ ದಿಗ್ಗಜರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂದೊಂದು ದಿನ ಭಾರತವೂ ತಂತ್ರಜ್ಞಾನದ ತವರೂರಾಗಲಿದೆ ಎಂಬ ಆಶಾಕಿರಣ ವ್ಯಕ್ತಪಡಿಸಿದರು.

ಭಾರತೀಯರ ಸಬಲೀಕರಣಕ್ಕೆ ತಂತ್ರಜ್ಞಾನದ ಬಳಕೆಯಾಗಬೇಕಿದೆ. ಗ್ರಾಮೀಣ ಜನರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸಾಫ್ಟ್‍ವೇರ್ ಕಂಪನಿಗಳಿಂದ ಇಡೀ ವಿಶ್ವವೇ ಬದಲಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಜಕ್ಕೂ ಇದೊಂದು ಅವಿಸ್ಮರಣೀಯ ಕ್ಷಣ. ಅಮೆರಿಕ-ಭಾರತದ ಸುದೀರ್ಘ ಸಂಬಂಧದ ಭಾಗವಾಗಿ ನಮ್ಮ-ನಿಮ್ಮ ಭೇಟಿ ನಡೆದಿದೆ. ಫೇಸ್‍ಬುಕ್‍ನಿಂದಲೇ ಜನರ ಜೀವನ ಆರಂಭವಾಗುತ್ತದೆ. ಇಂಟರ್ನೆಟ್ ಇಂದು ಇಡೀ ವಿಶ್ವವನ್ನೇ ಬದಲಾಯಿಸಿದೆ. ನಮ್ಮ ಸರ್ಕಾರದ ಆಡಳಿತದಲ್ಲೂ ತಂತ್ರಜ್ಞಾನಗಳ ಅಳವಡಿಕೆ ಕಾರ್ಯ ಚುರುಕುಗೊಂಡಿದೆ. ಬಡತನ ವಿರುದ್ಧ ಹೋರಾಡಲು ತಂತ್ರಜ್ಞಾನ ಬಳಕೆಯಾಗಬೇಕಿದೆ ಎಂದರು.

500 ರೈಲ್ವೆ ವಲಯಗಳಲ್ಲಿ ಗೂಗಲ್ ಸೇವೆ ನೀಡಲು ಚಿಂತನೆ ನಡೆದಿದೆ. ಸಿಲಿಕಾನ್ ವ್ಯಾಲಿಯಂತೆ ಭಾರತದಲ್ಲೂ ನಿರ್ಮಾಣದ ಗುರಿ ಹೊಂದಲಾಗಿದೆ. ಮೊಬೈಲ್ ಆಡಳಿತ ನಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಭಾರತದಲ್ಲಿ ಉಚಿತ ಇಂಟರ್ನೆಟ್ ಸೇವೆ ನೀಡಲು ಚಿಂತನೆ ನಡೆದಿದೆ ಎಂದರು.

ಇದರಿಂದಾಗಿ ಹಳ್ಳಿಗಳಲ್ಲಿ ವಿಚಾರ ಹಂಚಿಕೊಳ್ಳಲು ಸಹಕಾರಿಯಾಗಲಿದೆ. ವಿಶ್ವದ ಅಭಿವೃದ್ಧಿಗಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಸದೃಢ ವಿಶ್ವ ರೂಪಿಸುವುದೇ ಎಲ್ಲರ ಗುರಿಯಾಗಿದೆ. ಸಮಸ್ಯೆಗಳ ನಿವಾರಣೆಗೆ ತಂತ್ರಜ್ಞಾನ ಬಳಕೆಯಾಗಬೇಕಿದೆ ಎಂದು ಹೇಳಿದರು.

ತಂತ್ರಜ್ಞಾನ ಕ್ರಾಂತಿಯಲ್ಲಿ ಭಾರತದ ಪಾತ್ರವನ್ನು ಗುರುತಿಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಬಹುದೂರ ಸಾಗಿದೆ. ವಿಶ್ವದ ಹಾಗೂ ದೇಶದ ಒಳಿತಿಗೆ ತಂತ್ರಜ್ಞಾನದ ಸಮರ್ಪಕ ಬಳಕೆಯಾಗಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಿಇಓಗಳು ಭಾರತದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಶ್ಲಾಘಿಷಿಸಿರು. ಭಾರತಕ್ಕೆ ಅಗತ್ಯವಿರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಮೂಲಕ ಸಾಥ್ ನೀಡುವುದಾಗಿ ಹೇಳಿದರು.

Write A Comment