ರಾಷ್ಟ್ರೀಯ

ತನ್ನ ತಂದೆಯ ಮತ್ತಷ್ಟು ಮಾಹಿತಿಯನ್ನು ಬಹಿರಂಗಗೊಳಿಸುವಂತೆ ನೇತಾಜಿ ಪುತ್ರಿ ಅನಿತಾ ಬೋಸ್ ಆಗ್ರಹ

Pinterest LinkedIn Tumblr

anitha bose

ಕೋಲ್ಕತ್ತಾ,ಸೆ.27: ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ಬಗ್ಗೆ ಇತ್ತೀಚೆಗಷ್ಟೇ 64 ರಹಸ್ಯ ಕಡತವನ್ನು ಬಹಿರಂಗಗೊಳಿಸಿದ ಬೆನ್ನಲ್ಲೆ ನೇತಾಜಿ ಪುತ್ರಿ ಅನಿತಾ ಬೋಸ್ ಮತ್ತಷ್ಟು ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಪ್ರಧಾನಿ ನರೇಂದ್ರಮೋದಿ ಅವರನ್ನು ಆಗ್ರಹಿಸಿದ್ದಾರೆ.

ನೇತಾಜಿ ಸಾವಿನ ಬಗೆಗೆ ಇತ್ತೀಚೆಗೆ ಪಶ್ಚಿಮ ಬಂಗಾಳ ಸರ್ಕಾರ ಬಹಿರಂಗಗೊಳಿಸಿದ ಮಾಹಿತಿಗಳು ತಮಗೆ ತಲುಪಿಲ್ಲ.ವರದಿಯಲ್ಲಿ ಏನಿದೆ ಅಂತಲೂ ನಮಗೆ ಗೊತ್ತಿಲ್ಲ ಹೀಗಾಗಿ ಅದರ ಮಾಹಿತಿ ನೀಡಿ ಎಂದು 74 ವರ್ಷದ ಅನಿತಾ ಬೋಸ್ ಆಗ್ರಹಿಸಿದ್ದಾರೆ.

ನೇತಾಜಿ ಸಾವಿನ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ,ಈ ಬಗ್ಗೆ ನಮಗೂ ಕುತೂಹಲವಿದೆ ಹೀಗಾಗಿ ಮಾಹಿತಿಯನ್ನು ತಲಿಪಿಸುವ ಕೆಲಸ ಮಾಡಿ 30 ವರ್ಷಗಳಾದರೂ ಮಾಹಿತಿಯನ್ನು ಯಾಕೆ ಬಹಿರಂಗ ಮಾಡಲಿಲ್ಲ ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನು ಎನ್ನುವುದನ್ನು ತಿಳಿಸಿ ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ನೇತಾಜಿ ಕುಟುಂಬದ ಅನೇಕ ಸದಸ್ಯರೂ ಕೂಡ ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿ ಕಡತಗಳನ್ನು ಬಹಿರಂಗಗೊಳಿಸಿ ಎಂದಿದ್ದಾರೆ.

ಅಲ್ಲದೆ ನೇತಾಜಿ ಸಾವಿನ ಕುರಿತಾಗಿ ಬ್ರಿಟೀಷ್,ರಷ್ಯಾ ಮತ್ತು ಜಪಾನ್ ಸಕಾರವನ್ನೂ ಮಾಹಿತಿ ಬಹಿರಂಗಪಡಿಸುವಂತೆ ಮನವಿ ಮಾಡಿದ್ದಾರೆ.

Write A Comment