ರಾಷ್ಟ್ರೀಯ

ಬಿಹಾರದಲ್ಲಿ ಎಸ್ ಪಿ-ಎನ್ ಸಿಪಿ ಮೈತ್ರಿ; ತೃತೀಯ ರಂಗ ಅಸ್ಥಿತ್ವಕ್ಕೆ

Pinterest LinkedIn Tumblr

sp-ncpಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ತೃತೀಯ ರಂಗ ರಚನೆಯಾಗಿದೆ. ಜೆಡಿಯು- ಆರ್.ಜೆ.ಡಿ ಮೈತ್ರಿ ತೊರೆದಿದ್ದ ಸಮಾಜವಾದಿ ಪಕ್ಷ  ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್.ಸಿ.ಪಿ) ಹಾಗೂ ಇನ್ನಿತರ ಸ್ಥಳಿಯ ಪಕ್ಷಗಳೊಂದಿಗೆ ಕೈ ಜೋಡಿಸಿ ತೃತೀಯ ರಂಗ ರಚಿಸಿದೆ.

ಎನ್.ಸಿ.ಪಿ ಹಾಗೂ ಎಸ್.ಪಿ ಪಕ್ಷದ ಮೈತ್ರಿಯನ್ನು ಸಮಾಜವಾದಿ ಪಕ್ಷದ ಕಾರ್ಯದರ್ಶಿ ಗೋಪಾಲ್ ಯಾದವ್ ಖಚಿತಪಡಿಸಿದ್ದು, ಮಾಜಿ ಲೋಕಸಭಾ ಸ್ಪೀಕರ್ ಪಿಎ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಕ್ಷ, ಜಾತ್ಯಾತೀತ ಸಮಾಜವಾದಿ ಜನತಾ ದಳ ಪಕ್ಷವೂ ತೃತೀಯ ರಂಗದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಪ್ರಥಮ ಹಂತದ ಚುನಾವಣೆಗೆ ತೃತೀಯ ರಂಗದ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡುವುದುಆಗಿ ಗೋಪಾಲ್ ಯಾದವ್ ತಿಳಿಸಿದ್ದಾರೆ. ತೃತೀಯ ರಂಗ ಬಿಹಾರದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂದು ಗೋಪಾಲ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment