ರಾಷ್ಟ್ರೀಯ

ಮಹಾದಾಯಿ: ಕನಿಷ್ಠ ಎರಡು ಟಿಎಂಸಿ ಅಡಿ ನೀರು ಕೊಡಿಸಿ; ನ್ಯಾಯಮಂಡಳಿಗೆ ರಾಜ್ಯದ ಮೊರೆ

Pinterest LinkedIn Tumblr

VIDHAN-SOUDHAನವದೆಹಲಿ: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಭೀಕರ ಬರಗಾಲದಿಂದಾಗಿ ಮುಂಬೈ– ಕರ್ನಾಟಕ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಕನಿಷ್ಠ ಎರಡು ಟಿಎಂಸಿ ಅಡಿ ನೀರನ್ನಾದರೂ ಕಳಸಾ ಹಳ್ಳದಿಂದ ಮಲಪ್ರಭಾ ಜಲಾಶಯಕ್ಕೆ ತುರ್ತಾಗಿ ಹರಿಸಲು ಮಧ್ಯಂತರ ಆದೇಶ ನೀಡುವಂತೆ ಕೇಳಿ ಮಹಾದಾಯಿ ನ್ಯಾಯಮಂಡಳಿಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ.

ನದಿಗಳ ಜೋಡಣೆ ಯೋಜನೆ ಕುರಿತು ಚರ್ಚಿಸಲು ಮಂಗಳವಾರ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಕಳಸಾ ಬಳಿ ಜಲಾಶಯ ನಿರ್ಮಿಸದೆ, ಒಳ ಕಾಲುವೆಯ ಮೂಲಕ ಮಲಪ್ರಭಾಕ್ಕೆ ತುರ್ತಾಗಿ ನೀರೆತ್ತಲು ಆದೇಶ ನೀಡುವಂತೆ ಮಧ್ಯಂತರ ಅರ್ಜಿಯಲ್ಲಿ ಕೇಳಲಾಗುವುದು ಎಂದರು.

ಕಳಸಾ ಬಳಿ ಜಲಾಶಯ ಕಟ್ಟಲು ಉದ್ದೇಶಿಸಿರುವ ಸ್ಥಳ ಅರಣ್ಯ ಪ್ರದೇಶದಲ್ಲಿ ಬರುವುದರಿಂದ ತಾತ್ಕಾಲಿಕವಾಗಿ ಒಳಗಾಲುವೆ ಮೂಲಕ ನೀರು ತರಲು ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಕಳಸಾದಿಂದ ಈಗಾಗಲೇ ಸಹಜವಾಗಿ ಸುಮಾರು ಅರ್ಧ ಟಿಎಂಸಿ ಅಡಿ ನೀರು ಹರಿದು ಬರುತ್ತಿದೆ ಎಂದು ಸಚಿವರು ಹೇಳಿದರು.

ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ಭೀಕರ ಬರಗಾಲವನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ ಎರಡು ಟಿಎಂಸಿ ಅಡಿ ನೀರನ್ನು ತುರ್ತಾಗಿ ಕೊಡುವಂತೆ ಕೇಳಿ ಅರ್ಜಿ ಹಾಕಲಾಗುತ್ತಿದೆ ಎಂದು ಸಚಿವರು ನುಡಿದರು.

ನ್ಯಾ.ಜೆ.ಎಂ.ಪಾಂಚಾಲ ನೇತೃತ್ವದ ಮಹಾದಾಯಿ ನ್ಯಾಯಮಂಡಳಿ ಮುಂದೆ ಮತ್ತೊಂದು ಮಧ್ಯಂತರ ಅರ್ಜಿ ಸಲ್ಲಿಸಲಾಗುತ್ತದೆ. ಮಹಾದಾಯಿ ನದಿ ನೀರಿನಲ್ಲಿ ನಮ್ಮ ಪಾಲು 36 ಟಿಎಂಸಿ ಅಡಿ. ಇದರಲ್ಲಿ ಭಾಗಶಃ 7.56 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಅವಕಾಶ ಕೊಡಬೇಕೆಂದು ಎರಡನೇ ಅರ್ಜಿಯಲ್ಲಿ ಕೇಳಲಾಗುವುದು ಎಂದು ಸ್ಪಷ್ಟಪಡಿಸಿದರು.

44 ಟಿಎಂಸಿ ಅಡಿ ನೀರು ಸಂಗ್ರಹಣೆಗೆ ಸಿದ್ಧಪಡಿಸಿರುವ ಮಲಪ್ರಭಾ ಜಲಾಶಯ ಸಾಮರ್ಥ್ಯ 27ಟಿಎಂಸಿ ಅಡಿಗೆ ಇಳಿದಿದೆ. ಮಳೆ ಅಭಾವದಿಂದ ಈಗ ಜಲಾಶಯದಲ್ಲಿ 12ಟಿಎಂಸಿ ಅಡಿ ಸಂಗ್ರಹ ಮಾತ್ರ ಇರುವುದರಿಂದ ಒತ್ತಡ ಹೆಚ್ಚಾಗಿದೆ ಎಂದು ಜಲ ಸಂಪನ್ಮೂಲ ಸಚಿವರು ವಿವರಿಸಿದರು.

ನಾರಿಮನ್‌ ಜತೆ ಸಮಗ್ರ ಚರ್ಚೆ: ಮಹಾದಾಯಿ ನ್ಯಾಯಮಂ ಡಳಿ ಮುಂದೆ ರಾಜ್ಯವನ್ನು ಪ್ರತಿನಿಧಿ ಸುತ್ತಿರುವ ಹೆಸರಾಂತ ವಕೀಲ ಎಫ್‌. ಎಸ್‌. ನಾರಿಮನ್ ಅವರ ಜತೆ ಸೋಮವಾರ ಸಮಗ್ರವಾಗಿ ಚರ್ಚಿಸ ಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಇಲ್ಲಿ ತಿಳಿಸಿದರು.

ಕಳಸಾ– ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನರಗುಂದ, ನವಲ ಗುಂದಗಳಲ್ಲಿ ನಡೆಯುತ್ತಿರುವ ಪ್ರತಿ ಭಟನೆ ಹಾಗೂ ರೈತರ ಬೇಡಿಕೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಪಾಟೀಲ ವಿವರಿಸಿದರು.

ರಾಜ್ಯ ಸರ್ಕಾರದ ಚಿಂತನೆಗೆ ನಾರಿಮನ್‌ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಲಪ್ರಭಾ ಜಲಾಶಯದಲ್ಲಿ ಕೊರತೆ ಆಗಿರುವ ನೀರಿನ ಪ್ರಮಾಣ, ಬರಗಾಲ ಪರಿಸ್ಥಿತಿ  ಅಗತ್ಯ ದಾಖಲೆಗಳನ್ನು ಒದಗಿ ಸುವಂತೆ ಕೇಳಿದ್ದಾರೆ ಎಂದರು.

Write A Comment