ರಾಷ್ಟ್ರೀಯ

ಪ್ರಾದೇಶಿಕ ಸುಭದ್ರತೆಗೆ ಶ್ರೀಲಂಕಾದ ಬೆಳವಣಿಗೆ ಮಹತ್ವದ್ದು: ಪ್ರಧಾನಿ

Pinterest LinkedIn Tumblr

Wickremesinghe_2548717fಹೊಸದಿಲ್ಲಿ, ಸೆ.15: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂೆ ಮೂರು ದಿನಗಳ ಭೇಟಿಯ ಮೇಲೆ ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಇಬ್ಬರೂ ಧುರೀಣರು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು.

ಪ್ರಾದೇಶಿಕ ಸುಭದ್ರತೆಗೆ ಶ್ರೀಲಂಕಾದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳು ಬಹಳ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಪ್ರಗತಿ ಪರಸ್ಪರ ಎರಡೂ ದೇಶಗಳಿಗೂ ಮಹತ್ವದ್ದಾಗಿದೆ. ನಮ್ಮ ಪರಸ್ಪರ ಅಭಿವೃದ್ಧಿಯ ಕುರಿತಂತೆ ನಾವಿಬ್ಬರೂ ಚರ್ಚೆ ನಡೆಸಿದ್ದೇವೆ. ನಮ್ಮ ನಡುವಣ ವ್ಯಾಪಾರದಲ್ಲಿ ಬೆಳವಣಿಗೆಯಾಗಬೇಕು ಎಂದು ಮೋದಿ ಹೇಳಿದರು.

ಶ್ರೀಲಂಕಾದ ಜನತೆ ಬದಲಾವಣೆ, ಸುಧಾರಣೆಗಳು ಮತ್ತು ಪ್ರಗತಿಯ ದಿಕ್ಕಿನಲ್ಲಿ ವಿವೇಚನೆಯಿಂದ ಮತ ಚಲಾಯಿಸಿದ್ದಾರೆ ಎಂದು ಮೋದಿ ಅಭಿಪ್ರಾಯಪಟ್ಟರು.

ಭಾರತ-ಶ್ರೀಲಂಕಾ ಮೀನುಗಾರರ ಸಮಸ್ಯೆಯ ಕುರಿತು ನಾವಿಬ್ಬರೂ ಚರ್ಚೆ ನಡೆಸಿದ್ದೇವೆ. ಎರಡೂ ದೇಶಗಳ ಮೀನುಗಾರರ ಸಂಘಟನೆಗಳು ಈ ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಳ್ಳಲು ಪ್ರಯತ್ನ ಮುಂದುವರಿಸಬೇಕು ಎಂಬುದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

Write A Comment