ರಾಷ್ಟ್ರೀಯ

ಮುಖತಃ ಭೇಟಿ ಮಾಡಿ, ಫೇಸ್ಬುಕ್ ನಲ್ಲಲ್ಲ; ಪ್ರಧಾನಿಗೆ ಅಖಾಡ ಮಹಂತ್ ಆಗ್ರಹ

Pinterest LinkedIn Tumblr

kumbha-mela-2015ನಾಸಿಕ್: ಕುಂಭಮೇಳದಲ್ಲಿ ಭಾಗವಹಿಸಿರುವ ಅಖಾಡವೊಂದರ ಮಹಂತ್, ಸ್ಥಳಕ್ಕೆ ಬಂದು ಭೇಟಿ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

“ಮೋದೀಜಿ ಮುಖತಃ ಭೇಟಿ ಮಾಡಿ, ಫೇಸ್ಬುಕ್ ನಲ್ಲಿ ಬೇಡ” ಎಂದು ಬಡಾ ಅಖಾಡ ಉದಾಸಿನ್ ನ ಮಹಂತ್ ರಘುಮಾಣಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಲವು ಧರ್ಮಗಳ ಸಂಭ್ರಮಗಳಲ್ಲಿ ಭಾಗವಹಿಸುತ್ತಾರೆ ಆದರೆ ಇಲ್ಲಿಯವರೆಗೆ ಕುಂಭ ಮೇಳದಲ್ಲಿ ಭಾಗವಹಿಸಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಕುಂಭ ಮೇಳದಲ್ಲಿ ಸ್ವಚ್ಛತೆಗಾಗಿ ಜತೆಯಾಗಿರುವ ಬಡಾ ಅಖಾಡ ಉದಾಸಿನ್ ನ ಮಹಂತ್ “ಮೋದಿ ಸ್ವಚ್ಛತೆ ಬಗ್ಗೆ ಫೇಸ್ಬುಕ್ ನಲ್ಲಿ ಮಾತನಾಡುತ್ತಾರೆ. ನಾವು ಅಖಾಡದಲ್ಲಿ ಅದನ್ನು ತೋರಿಸಿದ್ದೇವೆ. ನಾನು ಇಲ್ಲಿ ತಯಾರಿಗಳ ಉಸ್ತುವಾರಿ ನೋಡಿಕೊಳ್ಳುತ್ತಾ ಟ್ರಮ್ಯಬಾಕ್ ನಲ್ಲಿ ಒಂದೂವರೆ ವರ್ಷದಿಂದ ಉಳಿದಿದ್ದೇನೆ” ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಟ್ರಿಂಬಕೇಶ್ವರ ದೇವಾಲಯಕ್ಕೆ ಮುಗಿಬೀಳುತ್ತಿರುವ ಭಕ್ತಾದಿಗಳಿ ೧೨ ರಿಂದ ೨೦ ಕಿಮೀ ಉದ್ದದ ಸಾಲುಗಳಲ್ಲಿ ನಿಂತು ಶಿವನ ದರ್ಶನ ಪಡೆಯುತ್ತಿದ್ದಾರೆ.

ದೇವಸ್ಥಾನದ ಒಂದು ದ್ವಾರವನ್ನು ಮಾತ್ರ ಆಡಳಿತ ಮಂಡಲಿ ತೆರೆದಿದ್ದು, ಉದ್ದದ ಸರತಿ ಸಾಲುಗಳಲ್ಲಿ ನಿಲ್ಲಲು ಬಯಸದವರಿಗೆ ದೊಡ್ಡ ಪರದೆಯ ಮೇಲೆ ಜ್ಯೋತಿರ್ಲಿಂಗವನ್ನು ದರ್ಶನ ಮಾಡುವ ಸೌಲಭ್ಯವನ್ನು ಕೂಡ ಕಲ್ಪಿಸಿದೆ.

ಭದ್ರತಾ ಸುರಕ್ಷತೆಗಾಗಿ ಉಳಿದ ದ್ವಾರಗಳನ್ನು ಮುಚ್ಚಲಾಗಿದೆ ಎಂದು ಕುಂಭಮೇಳದ ಎಡಿಜಿಪಿ ಯೋಗೇಶ್ ಚೌಹಾನ್ ತಿಳಿಸಿದ್ದಾರೆ. ಆದರೆ ದೇವಾಲಯದ ಉತ್ತರದ ದ್ವಾರವನ್ನು ತೆರೆಯಲಾಗಿದ್ದು ಅದು ಗಣ್ಯರ ಮತ್ತು ಅಲ್ಲಿನ ಪೂಜಾರಿಗಲಿಗೆ ನಿರ್ಬಂಧಿಸಲಾಗಿದೆ.

Write A Comment