ರಾಷ್ಟ್ರೀಯ

ಅಕ್ರಮವಾಗಿ 4.65 ಲಕ್ಷ ರೂಪಾಯಿ ನಗದು ಹಣ ಕೊಂಡೊಯ್ಯುತ್ತಿದ್ದ ಮಾಂಝಿ ಪುತ್ರ ಪೋಲೀಸರ ಬಲೆಗೆ

Pinterest LinkedIn Tumblr

Manjhi

ಪಟನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ಎನ್​ಡಿಎ ಮಿತ್ರ ಪಕ್ಷ ಹಿಂದುಸ್ತಾನ್ ಅವಾಮೀ ಮೋರ್ಚಾ ಅಧ್ಯಕ್ಷರಾದ ಜಿತನ್ ರಾಮ್ ಮಾಂಝಿ ಅವರ ಕಿರಿಯ ಪುತ್ರ ಪ್ರವೀಣ್ ಮಾಂಝಿ ಅವರನ್ನು 4.65 ಲಕ್ಷ ರೂಪಾಯಿ ನಗದು ಹಣ ಒಯ್ಯುತ್ತಿದ್ದುದಕ್ಕಾಗಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ ಪೊಲೀಸ್ ಠಾಣೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಮಾಂಝಿ ಪುತ್ರ ನಗದು ಹಣ ಒಯ್ಯುತ್ತಿದ್ದುದು ಪತ್ತೆಯಾಯಿತು ಎಂದು ಮೂಲಗಳು ಹೇಳಿವೆ.

ಅಕ್ಟೋಬರ್​ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಅದಾಯ ತೆರಿಗೆ ಇಲಾಖೆ ಮತ್ತು ರಾಜ್ಯ ಪೊಲೀಸರು ಕಪ್ಪುಹಣ ಮತ್ತು ಲೆಕ್ಕಕ್ಕಿಡದ ನಗದು ಹಣ ಬಳಕೆಯನ್ನು ತಡೆಯಲು ತಪಾಸಣೆ ತೀವ್ರಗೊಳಿಸಿದ್ದಾರೆ. ಮಾದರಿ ನೀತಿ ಸಂಹಿತೆಯ ಪ್ರಕಾರ ಯಾರೂ ಸಮರ್ಪಕ ವಿವರಣೆ ಇಲ್ಲದೆ 50,000 ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣ ಒಯ್ಯುವಂತಿಲ್ಲ.

ನಿರ್ಮಾಣ ಹಂತದಲ್ಲಿ ಇರುವ ಮನೆಯ ಕಾಮಗಾರಿ ಸಂಬಂಧ ಪಾವತಿ ಸಲುವಾಗಿ ಕುಟುಂಬದಿಂದ ಹಣ ಒಯ್ಯುತ್ತಿರುವುದಾಗಿ ಪ್ರವೀಣ್ ಮಾಂಝಿ ಪೊಲೀಸರಿಗೆ ತಿಳಿಸಿದರು ಎಂದು ವರದಿ ಹೇಳಿದೆ.

Write A Comment